ಉಡುಪಿ ಸುಲ್ತಾನ್‌ನಲ್ಲಿ ‘ವಿಶ್ವ -ವಜ್ರ’ ಡೈಮಂಡ್ ಪ್ರದರ್ಶನಕ್ಕೆ ಚಾಲನೆ

ಉಡುಪಿ, ಸೆ.7: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶೋರೂಂನಲ್ಲಿ ಸೆ.27ರವರೆಗೆ 20 ದಿನಗಳ ಕಾಲ ಹಮ್ಮಿಕೊಳ್ಳಲಾದ ‘ವಿಶ್ವ ವಜ್ರ’ ದಕ್ಷಿಣ ಭಾರತದ ಪ್ರೀಮಿಯರ್ ಡೈಮಂಡ್ ಜ್ಯುವೆಲ್ಲರಿ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಮಣಿಪಾಲದ ಮೆಕ್‌ಅಪ್ ಆರ್ಟಿಸ್ಟ್ ರೇಷ್ಮಾ ನುಸ್ರತ್ ಮಿಡ್ಲ್ ಈಸ್ಟ್ ವಜ್ರಾಭರಣಗಳ ಸಂಗ್ರಹ, ಮಣಿಪಾಲ ಮಾಹೆಯ ರಿಸರ್ಚ್ ಅಸೋಸಿಯೇಟ್ ಡಾ.ನಿಶಾ ಅಬ್ದುಲ್ ಖಾದರ್ ಇಟಲಿಯನ್ ಸಂಗ್ರಹ, ಮಂಗಳೂರು ಓಷಿಯನ್ ಪ್ರೊಟಿನ್ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕಿ ಫಾತಿಮಾ ಅಝ್ಬಾ ಫ್ರಾನ್ಸ್ ಸಂಗ್ರಹ, ಉಡುಪಿ ತ್ರಿಷ್ಣಾ ಡೆವಲಪರ್ಸ್‌ನ ಧನರಾಜ್ ಪೂಜಾರಿ ಹಾಗೂ ಕಾರ್ಕಳದ ಉದ್ಯಮಿ ಮುಹಮ್ಮದ್ ಹುಸೇನ್ ಬೆಲ್ಜಿಯಂ ವಜ್ರಾಭರಣಗಳ ಸಂಗ್ರಹವನ್ನು ಅನಾವರಣ ಗೊಳಿಸಿದರು.
ಬಳಿಕ ಮಾತನಾಡಿದ ರೇಷ್ಮಾ ನುಸ್ರತ್, ಸುಲ್ತಾನ್ ಎಲ್ಲರ ಮನೆಮನಗಳ ಬ್ರಾಂಡ್ ಆಗಿ ಬೆಳೆದಿದೆ. ಈ ಸಂಸ್ಥೆಯು ಗುಣಮಟ್ಟದ ಸೇವೆಯಿಂದ ಇಂದು ಮನೆಮಾತಾಗಿದೆ. ಬಡವರು, ಶ್ರೀಮಂತರು ಸೇರಿದಂತೆ ಎಲ್ಲ ವರ್ಗದವರ ಪ್ರೀತಿಪಾತ್ರವಾಗಿರುವ ಸುಲ್ತಾನ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಡಾ.ನಿಶಾ ಅಬ್ದುಲ್ ಖಾದರ್ ಮಾತನಾಡಿ, ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್‌ನಲ್ಲಿ ಚಿನ್ನಾಭರಣ ಹಾಗೂ ಡೈಮಂಡ್ ಕೈಗೆಟಗುವ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತಿದೆ. ಇಲ್ಲಿನ ಗ್ರಾಹಕ ಸ್ನೇಹಿ ಸಿಬ್ಬಂದಿಗಳಿಂದಾಗಿ ಸಂಸ್ಥೆಯು ಜನರಿಗೆ ಸಾಕಷ್ಟು ಹತ್ತಿರವಾಗಿದೆ ಎಂದರು.
ಧನರಾಜ್ ಪೂಜಾರಿ ಮಾತನಾಡಿ, ಇಲ್ಲಿನ ವಜ್ರಾಭರಣಗಳ ಸಂಗ್ರಹ ಹಾಗೂ ವಿನ್ಯಾಸ ಎಲ್ಲರಿಗೂ ಇಷ್ಟವಾಗುತ್ತದೆ. ವಿಶೇಷ ರಿಯಾಯಿತಿ ಕೂಡ ನೀಡಲಾಗುತ್ತದೆ. ಕರ್ನಾಟಕ ಮತ್ತು ಕೇರಳ ಬ್ರಾಂಡ್ ಆಗಿ ಈ ಸಂಸ್ಥೆ ಬೆಳೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉದ್ಯಮಿ ಶೇಖ್ ಮುಬೀನ್ ಮಾತನಾಡಿದರು. ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಅಬ್ದುಲ್ ವಾಹೀದ್, ಸೇಲ್ಸ್ ಮೆನೇಜರ್ ಸಂತೋಷ್ ಜೊಸೆಫ್, ಸುಲ್ತಾನ್ ಗ್ರೂಪ್ ಉಡುಪಿ ಪ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ಕೃತಿ ಮೂಡುಬೆಟ್ಟು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಶ್ವದ ವಿವಿಧ ದೇಶಗಳ ವಿವಿಧ ಹೊಸ ಮಾದರಿಯ ಡೈಮಂಡ್‌ಗಳ ಸಂಗ್ರಹ ಈ ಪ್ರದರ್ಶನದಲ್ಲಿದೆ. ಪ್ರದರ್ಶನದಲ್ಲಿ ಐಷರಾಮಿ ವಜ್ರಾ ಭರಣಗಳ ಸಂಗ್ರಹ, ಸಾಲಿಟೈರ್ ಕಲೆಕ್ಷನ್, ಸಾಂಪ್ರದಾಯಿಕ ಶೈಲಿಯ ವಜ್ರಾಭರಣಗಳು, ತನ್ಮನಿಯಾ ಕಲೆಕ್ಷನ್, ಬ್ರೈಡಲ್ ವಜ್ರಾಭರಣ ಕಲೆಕ್ಷನ್, ಅನ್ಕಟ್ ಡೈಮಂಡ್, ರುಬಿ ಎಮೆರಾಲ್ಡ್ ಜೆಮ್ ಸ್ಟೋನ್ ಕಲೆಕ್ಷನ್‌ಗಳ ಸಂಗ್ರಹ ಇವೆ. ಪ್ರತಿ ಡೈಮಂಡ್ ಮೌಲ್ಯದ ಮೇಲೆ ಶೇ.20ರವರೆಗೆ ರಿಯಾಯಿತಿ ನೀಡಲಾಗುವುದು ಎಂದು ಉಡುಪಿ ಬ್ರಾಂಚ್ ಮೆನೇಜರ್ ತಿಳಿಸಿದ್ದಾರೆ.






