ಅಕ್ರಮವಾಗಿ ಬಂಡೆ ಸ್ಪೋಟ: ಪ್ರಕರಣ ದಾಖಲು

ಮಣಿಪಾಲ, ಸೆ.7: ಮರ್ಣೆ ಗ್ರಾಮದ ಕುಕ್ಕಿಪಲ್ಕೆ ಎಂಬಲ್ಲಿ ಸರಕಾರಿ ಜಾಗದಲ್ಲಿ ಬಂಡೆಯಲ್ಲಿ ಅಕ್ರಮವಾಗಿ ಸ್ಪೋಟಕ ಬಳಸಿ ಸ್ಪೋಟಿಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.5ರಂದು 1.54 ಎಕರೆ ಸರಕಾರಿ ಜಮೀನಿನಲ್ಲಿ ರೋಜಿನಾ ರೋಡ್ರಿಗಸ್ ಹಾಗೂ ಅವರ ಪರವಾಗಿ ಅಧಿಕಾರ ಪತ್ರ ಹೊಂದಿರುವ ರಿಚಾರ್ಡ್ ಪೌಲ್ ಫೆರಾವೋ ಎಂಬವರು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆದು ಕೊಳ್ಳದೇ ಜಾಗದಲ್ಲಿನ ಬಂಡೆಕಲ್ಲನ್ನು ಅನಧೀಕೃತವಾಗಿ ಸ್ಪೋಟಕ ಬಳಸಿ ಸ್ಪೋಟ ಮಾಡಿರುವುದಾಗಿ ದೂರಲಾಗಿದೆ.
Next Story




