ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬೈಂದೂರು, ಸೆ.8: ತೆಂಗಿನ ಮರದಿಂದ ಬಿದ್ದು ಕೃಷಿ ಕೂಲಿ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಸೆ.7ರಂದು ಬೆಳಗ್ಗೆ ಯಡ್ತರೆ ಗ್ರಾಮದ ಯೋಜನಾ ನಗರ ಎಂಬಲ್ಲಿ ನಡೆದಿದೆ.
ಮೃತರನ್ನು ನಾಗೂರಿನ ವಸಂತ(48) ಎಂದು ಗುರುತಿಸಲಾಗಿದೆ. ಇವರು ಯೋಜನಾ ನಗರದ ಪ್ರಕಾಶ್ ನಜರತ್ ಎಂಬವರ ಮನೆಯ ತೆಂಗಿನ ಮರ ಹತ್ತಿ ಕಾಯಿ ಕೊಯ್ಯುತ್ತಿದ್ದ ವೇಳೆ ಅಕಸ್ಮಿಕವಾಗಿ ಕಾಲು ಜಾರಿಗೆ ಮರದಿಂದ ಕೆಳಗೆ ನೆಲಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಬೈಂದೂರು ಸರಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆಗೆ ಸ್ವಂದಿಸದೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




