ರಸ್ತೆಯಲ್ಲಿ ಚೆಲ್ಲಿದ ತೈಲ: ಅಗ್ನಿಶಾಮಕದಳದಿಂದ ತೆರವು

ಉಡುಪಿ, ಸೆ.9: ಅಜ್ಜರಕಾಡು ಜಿಲ್ಲಾಸ್ಪತ್ರೆಯ ಎದುರಿನ ಮುಖ್ಯ ರಸ್ತೆಯಲ್ಲಿ ತೈಲ ಚೆಲ್ಲಿದ ಪರಿಣಾಮ ವಾಹನಗಳು ನಿಯಂತ್ರಣ ತಪ್ಪಿ ಬಿದ್ದಿರುವ ಘಟನೆಗಳು ಬುಧವಾರ ನಡೆದಿವೆ.
ಬೈಕಿನಲ್ಲಿ ಆಯಿಲ್ ಕ್ಯಾನ್ ಸಾಗಿಸುತ್ತಿದ್ದಾಗ ಕ್ಯಾನ್ ರಸ್ತೆಗೆ ಬಿದ್ದು ವಾಯಿಲ್ ಸೊರಿಕೆಯಾಗಿತ್ತು ತಿಳಿದುಬಂದಿದೆ. ಆಟೋ ಚಾಲಕರಿಂದ ಮಾಹಿತಿ ಪಡೆದ, ಸಮಾಜಸೇವಕ ನಿತ್ಯಾನಂದ ಒಳಕಾಡು, ಸ್ಥಳಕ್ಕೆ ಬಂದು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಅಧಿಕಾರಿ ವಿನಾಯಕ ಕಲ್ಗುಟ್ಟಿಕರ್ ತಂಡವು ರಸ್ತೆಗೆ ರಭಸವಾಗಿ ನೀರು ಸಿಂಪಡಿಸಿ ಆಯಿಲ್ ತೆರವುಗೊಳಿಸಿತು.
Next Story




