ಯುವಕ ನಾಪತ್ತೆ

ಉಡುಪಿ, ಸೆ.10: ಕೊಡಂಕೂರು ಮೂಡುತೋಟದ ನಿವಾಸಿ ಶರತ್ (35) ಎಂಬ ಯುವಕ ಸೆ.7ರಂದು ಬೆಳಗ್ಗೆ 8:30ರ ಸುಮಾರಿಗೆ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 6 ಇಂಚು ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು ಕನ್ನಡ, ತುಳು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ಸಂ: 0820-2537999, ಪಿ.ಎಸ್.ಐ ಸಂ: 9480805447, ಉಡುಪಿ ವೃತ್ತ ನಿರೀಕ್ಷಕರು ದೂ.ಸಂ:9480805430 ಅನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story




