ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಉಡುಪಿ, ಸೆ.10: ಬ್ಯಾಂಕ್ ಖಾತೆಯಿಂದ ಲಕ್ಷಾಂತರ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಠಲ ಎಂಬವರು ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ಅಲೆವೂರು ಶಾಖೆಯಲ್ಲಿ 6,00,000ರೂ. ಹಣ ಇಟ್ಟಿದ್ದು ಅದನ್ನು ಬ್ಯಾಂಕ್ ಅಫ್ ಬರೋಡಾಕ್ಕೆ ವರ್ಗಾವಣೆ ಮಾಡಲು ಜೂ.22ರಂದು ಬ್ಯಾಂಕಿಗೆ ಹೋಗಿ ಪೇಪರ್‌ಗಳಿಗೆ ಸಹಿ ಮಾಡಿ ಬಂದಿದ್ದರು. ಬಳಿಕ ಅವರು ಮಗಳ ಮನೆಯಾದ ವಿಶಾಖಪಟ್ಟಣಕ್ಕೆ ಹೋಗಿದ್ದು ಸೆ.8ರಂದು ಮತ್ತೆ ಯೂನಿಯನ್ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಉಳಿತಾಯ ಖಾತೆಯಿಂದ 4,40,000/ವರ್ಗಾವಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ಜೂ.15ರಂದು ಅಪರಿಚಿತರು ಬ್ಯಾಂಕ್ ಖಾತೆಯಿಂದ ವಿಠಲ ಅವರಿಗೆ ತಿಳಿಯದೆ 4,40,000ರೂ. ಹಣವನ್ನು ಆನ್‌ಲೈನ್ ಮೂಲಕ ತೆಗೆದು ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story




