ಮನೆಯಲ್ಲಿ ಬಂಧಿಯಾಗಿದ್ದ ಇಬ್ಬರು ಮಕ್ಕಳ ರಕ್ಷಣೆ

ಉಡುಪಿ, ಸೆ.11: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದು ಮನೆಯಲ್ಲಿಯೇ ಬಂಧಿಯಾಗಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಿಸಿರುವ ಘಟನೆ ಉದ್ಯಾವರದಲ್ಲಿ ಸೆ.10ರಂದು ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ಸಮಾಜ ಸೇವಕರ ನಿತ್ಯಾನಂದ ಒಳಕಾಡು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಜ್ವಲ್ ಹಾಗೂ ರಮ್ಯಾ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ, ಅಕ್ಕ ಪಡೆಯ ಸಿಬ್ಬಂದಿ ರಕ್ಷಿತಾ ಹಾಗೂ ವನಿತಾ ಸ್ಥಳ ಭೇಟಿ ನೀಡಿ, ಮಕ್ಕಳನ್ನು ರಕ್ಷಿಸಿದ್ದಾರೆ.
ರಕ್ಷಿಸಿದ ಮಕ್ಕಳನ್ನು ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದ್ದು, ಸಮಿತಿಯ ಆದೇಶದ ಮೇರೆಗೆ ಮಕ್ಕಳಿಗೆ ದೊಡ್ಡಣಗುಡ್ಡೆಯ ಸರಕಾರಿ ಬಾಲಕರ ಬಾಲ ಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿಯನ್ನು ಕಲ್ಪಿಸಲಾಗಿದೆ.
Next Story




