ವಿದ್ಯಾರ್ಥಿ ಆತ್ಮಹತ್ಯೆ

ಬ್ರಹ್ಮಾವರ, ಸೆ.11: ಮಂಚದ ಕಾಲನ್ನು ಕುತ್ತಿಗೆಗೆ ಇಟ್ಟು ವಿದ್ಯಾರ್ಥಿ ಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.9ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ನಡೂರು ಗ್ರಾಮದ ನಿಕ್ಷೇಪ(17) ಎಂದು ಗುರುತಿಸಲಾಗಿದೆ. ಪಿಯುಸಿ ವಿದ್ಯಾರ್ಥಿಯಾಗಿದ್ದ ನಿಕ್ಷೇಪ, ಓದಲು ರೂಮಿಗೆ ಹೋಗಿದ್ದು, ರಾತ್ರಿಯಾದರೂ ಬಾಗಿಲು ತೆಗೆಯದೇ ಇದ್ದಾಗ, ಮನೆಯವರು ಬಾಗಿಲು ಒಡೆದು ಒಳಗೆ ಹೋದರು. ಅಲ್ಲಿ ನೋಡಿದಾಗ ನಿಕ್ಷೇಪ ನೆಲದಲ್ಲಿ ಮಲಗಿದ ಸ್ಥಿತಿಯಲ್ಲಿದ್ದು, ಆತನ ಕುತ್ತಿಗೆಯ ಮೇಲೆ ಮಂಚದ ಒಂದು ಬದಿಯ ಕಾಲು ಇರುವುದು ಕಂಡುಬಂದಿದೆ. ಆತನನ್ನು ಕೂಡಲೆ ಬ್ರಹ್ಮಾವರ ಖಾಸಗಿ ಆಸ್ಪತೆಗೆ ಕರೆದು ಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ನಿಕ್ಷೇಪ ಮೃತಪಟ್ಟಿರುವುದಾಗಿ ತಿಳಿಸಿದರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




