Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಪರಂಪರೆಯನ್ನು ಹೊಸ ಝೆನ್‌ಜಿ ಪೀಳಿಗೆಗೆ...

ಪರಂಪರೆಯನ್ನು ಹೊಸ ಝೆನ್‌ಜಿ ಪೀಳಿಗೆಗೆ ದಾಟಿಸಬೇಕು: ಡಾ.ವಿವೇಕ್ ರೈ

ಕು.ಶಿ.ಹರಿದಾಸ್ ಭಟ್, ಡಾ.ಉಪಾಧ್ಯಾಯ ದಂಪತಿ ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ12 Sept 2026 8:19 PM IST
share
ಪರಂಪರೆಯನ್ನು ಹೊಸ ಝೆನ್‌ಜಿ ಪೀಳಿಗೆಗೆ ದಾಟಿಸಬೇಕು: ಡಾ.ವಿವೇಕ್ ರೈ

ಉಡುಪಿ, ಸೆ.12: ಪರಂಪರೆಯ ಅನುಭವದಿಂದ ದೇಶ ಕಟ್ಟಲು ಸಾಧ್ಯ. ನಾವು ಈ ಪರಂಪರೆಯನ್ನು ಹೊಸ ಝೆನ್‌ಜಿ ಪೀಳಿಗೆಗೆ ದಾಟಿಸಬೇಕಾಗಿದೆ. ಪರಂಪರೆಯ ಅರಿವು, ಅನುಭವ, ತಿಳುವಳಿಕೆಯನ್ನು ಬಿಟ್ಟು ಸಮಾಜ, ದೇಶವನ್ನು ಕಟ್ಟಲಾಗದು ಎಂದು ಹಿರಿಯ ಜಾನಪದ ಸಾಹಿತಿ, ನಿವೃತ್ತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ.

ಶನಿವಾರ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಸಹಯೋಗದಲ್ಲಿ ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಹಾಗೂ ಡಾ.ಯು.ಪಿ. ಉಪಾಧ್ಯಾಯ- ಡಾ.ಸುಶೀಲಾ ಪಿ.ಉಪಾಧ್ಯಾಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ನಮಗೆಲ್ಲಾ ಸಂತೋಷ, ಸಂತೃಪ್ತಿ ಹಾಗೂ ಸಂಭ್ರಮ ಏನೆಂದರೆ, ಇಂದಿನ ಪೀಳಿಗೆಯ ಪರಂಪರೆಯಲ್ಲಿ ನಾವೆಲ್ಲ ಯಾವೊದೋ ಒಂದು ಕೊಂಡಿಯಾಗಿ ದ್ದೇವೆ ಎಂಬುದು. ನಾವೆಲ್ಲ ಈ ಝೆನ್‌ಜಿಗಿಂತ 60-70 ವರ್ಷ ಹಿಂದೆ ಹುಟ್ಟಿದ್ದೇವೆ. ಹೀಗಾಗಿ ನಮ್ಮ ಮಾತು ಅವರಿಗೆ ಅರ್ಥವಾಗಲಿಕ್ಕಿಲ್ಲ. ಅವರ ಭಾಷೆ ನಮಗೆ ಅರ್ಥವಾಗಲಿಕ್ಕಿಲ್ಲ. ಏಕೆಂದರೆ ಇಂಥ ಸಂದರ್ಭದಲ್ಲಿ ಸಂವಹನ ಕಷ್ಟ ಎಂದು ಡಾ.ವಿವೇಕ ರೈ ಹೇಳಿದರು.

ದೇಶದ ಒಂದು ವಯಸ್ಸಿನ ಝೆನ್‌ಜಿ ವರ್ಗ 10ಶೇ. ಇದ್ದು, ಅವರಿಂದು ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುತ್ತಾರೆ. ತಂತ್ರಜ್ಞಾನದಲ್ಲಿ ಅವರು ನಮಗಿಂತ 100 ಪಟ್ಟು ಮುಂದಿದ್ದಾರೆ. ಆದರೆ ನಮಗೆ ಒಂದು ಕಾಲದಲ್ಲಿದ್ದ ತಿಳುವಳಿಕೆ ಅದಕ್ಕಿಂತ ಭಿನ್ನವಾಗಿತ್ತು, ಬಹಳ ಮುಖ್ಯವಾಗಿತ್ತು. ಅದನ್ನು ಮರೆತು ನಾವು ಸಮಾಜವನ್ನು, ದೇಶವನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ವಿವರಿಸಿದರು.

ಇಂದು ಕೋಟಿ, ಟ್ರಿಲಿಯನ್ ಆರ್ಥಿಕತೆಯಿದ್ದರೂ ಭಾಷೆ, ಸಂಸ್ಕೃತಿ ತಿಳಿಯದಿದ್ದರೆ ಏನು ಪ್ರಯೋಜನ? ಹಣದಿಂದ ಎಲ್ಲವನ್ನೂ ಕಟ್ಟಲಾಗದು. ವಿದ್ವತ್ ಪರಂಪರೆ ಕ್ಷೀಣಿಸುತ್ತಿದ್ದು ಹೊಸ ಪರಂಪರೆಯನ್ನು ಜೋಡಿಸಬೇಕು. ತಿಳುವಳಿಕೆಗೆ ಕೊನೆಯಿಲ್ಲ. ಪೂರಕ ಮನೋಧರ್ಮವಿಲ್ಲದೆ ಸಂಶೋಧನೆ ಸಾಧ್ಯವಾಗದು. ಸಂಸ್ಕೃತಿಯ ಒಳಹೋಗಿ ಸಂಶೋಧನೆ, ಅಧ್ಯಯನ ಮುಂದುವರಿಯಬೇಕು ಎಂದೂ ಡಾ.ರೈ ಅಭಿಪ್ರಾಯಪಟ್ಟರು.

ಡಾ.ಉಪಾಧ್ಯಾಯ ದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾಷಾ ತಂತ್ರಾಂಶ ತಜ್ಞ ಹಾಗೂ ಸಂಶೋಧಕ ಪ್ರೊ.ಕೆ. ಪಿ. ರಾವ್, ಚಿಕಿತ್ಸಕ ಬುದ್ಧಿ ಹಾಗೂ ವಿವೇಕದಿಂದ ಪ್ರತಿಯೊಂದನ್ನು ನೋಡುವ ಗುಣವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು. ಸಂಸ್ಕೃತಕ್ಕಿಂತಲೂ ತುಳು ಹೆಚ್ಚು ಸ್ವರವಂತ ಭಾಷೆ. ತುಳುಭಾಷೆಯನ್ನು ಕನ್ನಡ ಲಿಪಿಯಲ್ಲೇ ಹೆಚ್ಚಾಗಿ ಬರೆಯಲಾಗುತ್ತದೆ. ತುಳು ಲಿಪಿಯನ್ನು ಹೆಚ್ಚಾಗಿ ಬಳಸಿದವರು ಸಮಾಜ ಮೇಲ್ವರ್ಗದವರು ಮಾತ್ರ. ಆದರೆ ಅವರು ಅದನ್ನು ಕಾವ್ಯ ಬರೆಯಲು ಬಳಸಿಲ್ಲ. ತುಳು ಭಾಗವತ ಬರೆದುದು ಕನ್ನಡ ಲಿಪಿಯಲ್ಲೇ ಎಂದರು.

ಕು.ಶಿ.ಹರಿದಾಸ ಭಟ್ ಜಾನಪದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕನರಾಡಿ ವಾದಿರಾಜ ಭಟ್, ಜ್ಞಾನದ ಬೆಳಕನ್ನು ತೋರಿದವರನ್ನು ನಾವೆಂದೂ ಮರೆಯಬಾರದು. ನಿಜವಾದ ಸಂಶೋಧಕರು, ತಜ್ಞರು ಯಾರು ಎಂಬ ಪ್ರಶ್ನೆ ಇಂದು ಕಾಡುತ್ತಿದೆ. ಹಳ್ಳಿಯಲ್ಲಿರುವ ಜನಪದರ ವಿದ್ವತ್ತನ್ನು ಗುರುತಿಸುವ ಕೆಲಸ ಇಂದು ನಡೆಯಬೇಕು ಎಂದರು.

ಡಾ.ಉಪಾದ್ಯಾಯ ದಂಪತಿ ಪ್ರಶಸ್ತಿ ಪುರಸ್ಕೃತ ಕೆ.ಪಿ.ರಾವ್ ಕುರಿತು ಯಕ್ಷಗಾನ ಹಿರಿಯ ವಿದ್ವಾಂಸ ಡಾ.ಕೆ.ರಾಘವ ನಂಬಿಯಾರ್ ಹಾಗೂ ಕು. ಶಿ. ಜಾನಪದ ಪ್ರಶಸ್ತಿ 2026 ಪುರಸ್ಕೃತ ಡಾ.ಕನರಾಡಿ ವಾದಿರಾಜ್ ಭಟ್ ಕುರಿತು ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಚಂದ್ರಾವತಿ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಎಂಜಿಎಂ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಗಾಯತ್ರಿ ಪೈ ಉಪಸ್ಥಿತರಿದ್ದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ ಸ್ವಾಗತಿಸಿದರು. ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣ್ ಕುಮಾರ್ ಎಸ್. ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







share
ವಾರ್ತಾಭಾರತಿ
ವಾರ್ತಾಭಾರತಿ
Next Story
X