ಬೆಳಪು ದೇವಸ್ಥಾನದ ಸೊತ್ತು ಕಳವು: ಪ್ರಕರಣ ದಾಖಲು

ಶಿರ್ವ, ಸೆ.13: ಬೆಳಪು ಗ್ರಾಮದ ಬ್ರಹ್ಮಲಿಂಗೇಶ್ವರ ಮತ್ತು ಖಡ್ಗೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಆ.24ರಂದು ದೇವಸ್ಥಾನದ ಎದುರಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಗರ್ಭಗುಡಿಯ ಬಾಗಿಲಿನ ಬೀಗವನ್ನು ಮುರಿದು ಎರಡು ದೇವರ ಮೂರ್ತಿಗೆ ತೊಡಿಸಿದ್ದ 1,30,000ರೂ. ಮೌಲ್ಯದ ಬೆಳ್ಳಿಯ ಮುಖವಾಡಗಳನ್ನು ಹಾಗೂ ದೇವಸ್ಥಾನದ ಒಳಗಿನ ಪ್ರಾಂಗಣದಲ್ಲಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




