ಲಾಡ್ಜ್‌ನಲ್ಲಿ ಯುವಕ ಆತ್ಮಹತ್ಯೆ

ಉಡುಪಿ, ಸೆ.13: ನಗರದ ಖಾಸಗಿ ವಸತಿಗೃಹವೊಂದರಲ್ಲಿ ಬಾಡಿಗೆಗೆ ಕೊಠಡಿ ಪಡೆದಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ನಡೆದಿದೆ.
ಮೃತರನ್ನು ಗದಗದ ಸಂಗಪ್ಪ ಎಂಬವರ ಮಗ ಮನೋಹರ್ ಮೂಲಿಮನಿ (24) ಎಂದು ಗುರುತಿಸಲಾಗಿದೆ. ನಗರ ಪೋಲಿಸ್ ಠಾಣೆಯ ಎಸ್‌ಐ ಭರತೇಶ್ ಘಟನಾ ಸ್ಥಳಕ್ಕೆ ಬಂದು ಮಹಜರು ಪ್ರಕ್ರಿಯೆ ನಡೆಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು, ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
Next Story




