ದೇವಸ್ಥಾನಗಳಲ್ಲಿ ಇಬ್ಬರು ಮಹಿಳೆಯರ ಸರ ಸುಲಿಗೆ

ಕೋಟ, ಸೆ.15: ಚೌತಿ ಹಬ್ಬದ ಪ್ರಯುಕ್ತ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಹೋಗಿದ್ದ ಮಹಿಳೆಯರಿಬ್ಬರ ಲಕ್ಷಾಂತರ ರೂ. ಮೌಲ್ಯದ ಸರ ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ಮಣೂರು ಗ್ರಾಮದ ಬೇಬಿ ಶೆಡ್ತಿ ಎಂಬವರು ಸೆ.14ರಂದು ಕೋಟ ಶ್ರೀಅಮೃತೇಶ್ಚರಿ ದೇವಸ್ಥಾನಕ್ಕೆ ಹೋಗಿ ಪೂಜೆ ಕಾರ್ಯ ಮುಗಿಸಿ ಹೊರಗಡೆ ಬಂದು ನೋಡಿದಾಗ ಕುತ್ತಿಗೆಯಲ್ಲಿ ಇದ್ದ ಸುಮಾರು 3,00,000ರೂ. ಮೌಲ್ಯದ 24ಗ್ರಾಂ ತೂಕದ ಕರಿಮಣಿ ಸರ ಕಳವಾಗಿರುವುದು ಕಂಡು ಬಂದಿದೆ. ದೇವಸ್ಥಾನದ ಒಳಗಡೆ ಕುತ್ತಿಗೆಯಲ್ಲಿದ್ದ ಸರವನ್ನು ಕಳ್ಳರು ಎಳೆದು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ನಾಡ ಗ್ರಾಮದ ಮುತ್ತು(75) ಎಂಬವರು ಮನೆಯವ ರೊಂದಿಗೆ ಸೆ.14ರಂದು ಚೌತಿ ಹಬ್ಬದ ಪ್ರಯುಕ್ತ ಕುಂಭಾಶಿ ಆನೆಗುಡ್ಡೆ ಗಣಪತಿ ದೇವಸ್ಥಾನಕ್ಕೆ ಹೋಗಿದ್ದು, ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಬರುತ್ತಿರುವಾಗ ಕುತ್ತಿಗೆಯಲ್ಲಿದ್ದ 2,50,000ರೂ. ಮೌಲ್ಯದ ಸುಮಾರು 22 ಗ್ರಾಂ ತೂಕದ ಚಿನ್ನದ ಸರವನ್ನು ತಮಿಳರಂತೆ ಕಾಣುವ 2-3 ಅಪರಿಚಿತ ಮಹಿಳೆಯರು ಎಳೆದುಕೊಂಡು ಹೋಗಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




