ಸೋಮೇಶ್ವರ ಕಡಲ ಕಿನಾರೆಯಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮ

ಬೈಂದೂರು, ಸೆ.17: ಕರ್ನಾಟಕ ಅರಣ್ಯ ಇಲಾಖೆ ಬೈಂದೂರು ವಲಯ, ರೋಟರಿ ಕ್ಲಬ್ ಬೈಂದೂರು, ಕ್ಲೀನ್ ಕಿನಾರ ತಂಡ, ಎನ್.ಎಸ್.ಎಸ್ ಬೈಂದೂರು ಇದರ ಸಹಯೋಗದಲ್ಲಿ ಕಡಲ ತೀರ ಸ್ವಚ್ಚತಾ ಕಾರ್ಯಕ್ರಮ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆಯಿತು.
ಪರಿಸರ ಅಧ್ಯಯನ ಮತ್ತು ಸಂಶೋಧಕಿ ಪಲ್ಲವಿ ಪೂಜಾರಿ ಮಾತನಾಡಿ, ಪರಿಸರ ಕಾಳಜಿ ಮತ್ತು ಸ್ವಚ್ಚತೆ ಪ್ರತಿ ಯೊಬ್ಬ ಜವಬ್ದಾರಿಯಾಗಿದೆ. ಮೈಕ್ರೋ ಪ್ಲಾಸ್ಟಿಕ್ ಸಂಗ್ರಹಣೆಯ ಪರಿಣಾಮ ವಾತಾವರಣದ ಉಷ್ಣತೆ ಹೆಚ್ಚಿದೆ. ಕಡಲ ಪ್ರಬೇಧಗಳು ಉಳಿಯಬೇಕಾದರೆ ಪರಿಸರ ಕಾಳಜಿ ಬಹುಮುಖ್ಯ ಎಂದರು.
ಉಪವಲಯ ಅರಣ್ಯಾಧಿಕಾರಿ ಹರ್ಷ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಜಿ.ಉಪ್ಪುಂದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಯಾಸಿನ್ ಶಿರೂರು, ಕ್ಲೀನ್ ಕಿನಾರ ತಂಡದ ಕವಿತಾ ರಾಘವೇಂದ್ರ ಹಾಗೂ ರಾಜೇಂದ್ರ ಅವರನ್ನು ಸಮ್ಮಾನಿಸಲಾಯಿತು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ಕ್ಲೀನ್ ಕಿನಾರ ತಂಡದ ಮುಖ್ಯಸ್ಥ ರಾಘವೇಂದ್ರ ಪಡುವರಿ, ಕರಾವಳಿ ಕಾವಲು ಪಡೆಯ ಯುವರಾಜ್ ಉಪಸ್ಥಿತರಿದ್ದರು. ಪ್ರದೀಪ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಮಣಿಕಂಠ ದೇವಾಡಿಗ ವಂದಿಸಿದರು.






