ಮಣಿಪಾಲ: ಅವಧಿ ಮೀರಿದ ಗೇಮ್ ಸೆಂಟರ್ ವಿರುದ್ಧ ಪ್ರಕರಣ

ಮಣಿಪಾಲ, ಸೆ.19: ಇಲ್ಲಿನ ಶಿವಳ್ಳಿ ಗ್ರಾಮದ ಮಣಿಪಾಲ ಅಂಬಾಗಿಲು ರಸ್ತೆಯಲ್ಲಿರುವ ಗೇಮ್ಸ್ ಸೆಂಟರ್ ಸಿಟಿ ಅರೇನಾದಲ್ಲಿ ಅವಧಿಗೂ ಮೀರಿ ಆಟಗಳನ್ನು ಆಡಿಸುತ್ತಿದ್ದು ಉಡುಪಿಯ ವಿವಿದೆಡೆಯಿಂದ ಸಾರ್ವಜನಿಕರು ಅಲ್ಲಿ ಬಂದು ಜಮಾಯಿಸುವುದರಿಂದ ಆ ಪರಿಸರದಲ್ಲಿ ವಾಸವಿರುವ ಇತರ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತೊಂದರೆ ಯಾಗುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ರಾತ್ರಿ ರೌಂಡ್ಸ್ ಕರ್ತವ್ಯದ ಪೊಲೀಸರು ಗೇಮ್ಸ ಸೆಂಟರ್ ಮುಚ್ಚಿಸಿದ್ದಾರೆ.
ನಿಗದಿತ ಸಮಯಕ್ಕೆ ಕೇಂದ್ರವನ್ನು ಮುಚ್ಚಲು ಗೇಮ್ಸ್ ಸೆಂಟರನ್ ಸಂಬಂಧಿತರಿಗೆ ಹಲವಾರು ಬಾರಿ ಮೌಖಿಕವಾಗಿ ತಿಳಿಸಿದರೂ ಅವಧಿ ಮೀರಿ ಯಾವುದೇ ಪರವಾನಿಗೆ ಪಡೆಯದೇ ಕಾರ್ಯಚರಿಸುವುದರಿಂದ ಸ್ಥಳೀಯ ಅಪಾರ್ಟ್ ಮೆಂಟ್ ನಿವಾಸಿಗಳ ಶಾಂತಿ, ನೆಮ್ಮದಿಗೆ ಭಂಗವನ್ನುಂಟು ಆಗಿತ್ತೆಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




