ಖಾತೆಯಿಂದ ಮೂರು ಲಕ್ಷ ರೂ. ವಂಚನೆ: ಪ್ರಕರಣ ದಾಖಲು

ಬೈಂದೂರು, ಸೆ.19: ಉಳಿತಾಯ ಖಾತೆಯೊಂದರಿಂದ ದುಷ್ಕರ್ಮಿಗಳು ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಬೀಬಿ ಸುಹೇಲಾ ಎನ್ನುವರು ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕ್ ಅಫ್ ಬರೋಡಾ ಶಿರೂರು ಶಾಖೆಯ ಇವರ ಖಾತೆಯಲ್ಲಿ ಜೂ.15ರಂದು 4ಲಕ್ಷ ಹಣ ಜಮಾ ಇದ್ದು, ಯಾರೋ ದುಷ್ಕರ್ಮಿಗಳು ಇವರ ಬ್ಯಾಂಕ್ ಖಾತೆಯಲ್ಲಿದ್ದ 3,41,000 ರೂ ಹಣವನ್ನು ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




