ಕಾಪು ಬೀಚ್‌ನಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮ

ಕಾಪು, ಸೆ.20: ಉಡುಪಿ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್, ವಿವಿಧ ಸಂಘ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರಗಳೊಂದಿಗೆ ಬೀಚ್ ಸ್ವಚ್ಚತಾ ಅಭಿಯಾನವನ್ನು ಕಾಪು ಬೀಚ್‌ನಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆ ಬೀಚ್ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಕಾಪು ಬೀಚ್ ಸುತ್ತಮುತ್ತ ಪ್ರವಾಸಿಗರು ಎಸೆದಂತಹ ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಾಪು ಪುರಸಭೆಗೆ ಹಸ್ತಾಂತರಿಸಲಾಯಿತು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಕಾಪು ಪುರಸಭೆ ಮುಖ್ಯಧಿಕಾರಿ ನೀಲಕಂಠ ಮೇಸ್ತ, ಪುರಸಭಾ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಸಮುದಾಯ ಸಂಘಟನಾಧಿಕಾರಿ ಗಳಾದ ರತ್ನಾಕರ ಶೆಟ್ಟಿ, ವಿದ್ಯಾಲತಾ, ನೂರುದ್ದಿನ್, ಉಮೇಶ್ ಕರ್ಕೇರ, ವಾಣಿ ಆಳ್ವಾ, ಯುವಕ ಮಂಡಲದ ಅಧ್ಯಕ್ಷ ಅನ್ವರ್ ಅಲಿ ಕಾಪು, ಉಪಾಧ್ಯಕ್ಷ ಉಮೇಶ್ ಕರ್ಕೇರ, ಕಾರ್ಯದರ್ಶಿ ಸತೀಶ್ ಆಚಾರ್ಯ, ಜತೆ ಕಾರ್ಯದರ್ಶಿ ಹಸನ್ ಅಬ್ದುಲ್ ಖಾದರ್, ಕೋಶಾಧಿಕಾರಿ ಮುಹಮ್ಮದ್ ಅಲಿ, ಅಬ್ದುಲ್ ಸತ್ತಾರ್, ಅಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
ಅಭಿಯಾನದಲ್ಲಿ ಪುರಸಭೆ ಸದಸ್ಯರು, ಸ್ವಚ್ಛತಾ ಕರ್ಮಿಗಳು, ಸಂಘ, ಸಂಸ್ಥೆಯವರು, ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಗಳು ತೊಡಗಿಸಿಕೊಂಡಿದ್ದರು. ಸ್ವಚ್ಛಂ ಗ್ರೂಪ್ ಮಾಲಕ ತಾರಾನಾಥ್ ಮತ್ತು ಗುರುಪ್ರಸಾದ್, ದನ್ಪಾಲ್ ಕೋಟ್ಯಾನ್, ಚಂದ್ರಶೇಖರ್ ಮೆಂಡನ್, ನಿತಿನ್, ಅಭಿಲಾಶ್ ಭಟ್ ಭಾಗವಹಿಸಿದ್ದರು.




