ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

ಪಡುಬಿದ್ರಿ, ಸೆ.20: ಹೆಜಮಾಡಿ ಕೋಡಿಯ ಯಾರ್ಡ್ ಬಳಿ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ.19ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಹೆಜಮಾಡಿ ಕೋಡಿ ನಿವಾಸಿ ಭಾಸ್ಕರ್ ಪುತ್ರನ್(50) ಎಂದು ಗುರುತಿಸಲಾಗಿದೆ. ಇವರು ಬೀಸು ಬಲೆಯ ಸಹಾಯದಿಂದ ಮೀನು ಹಿಡಿಯುವಾಗ ಬಲೆಯು ದಾರದ ಸಮೇತ ಸಮುದ್ರಕ್ಕೆ ಬಿದ್ದಿದ್ದು ಬಲೆಯನ್ನು ಹಿಡಿಯಲು ಸಮುದ್ರಕ್ಕೆ ಇಳಿದ ಭಾಸ್ಕರ್ ಪುತ್ರನ್ ಅಲೆಗಳ ಹೊಡೆತಕ್ಕೆ ಆಕಸ್ಮಿಕವಾಗಿ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




