ಉಡುಪಿ, ದ.ಕ ಜಿಲ್ಲೆಯಲ್ಲಿ ವಿಭಾಗಮಟ್ಟದ ದಸರಾ ಕ್ರೀಡಾಕೂಟ

ಉಡುಪಿ, ಸೆ.21: ಪ್ರಸಕ್ತ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಅಂಗವಾಗಿ ವಾಲಿಬಾಲ್, ಕಬಡ್ಡಿ, ಲಾನ್‌ಟೆನಿಸ್, ಟೇಬಲ್‌ಟೆನಿಸ್, ಕುಸ್ತಿ, ಬಾಕ್ಸಿಂಗ್ ಮತ್ತು ವುಷು ಸ್ಪರ್ಧೆಗಳನ್ನು ಉಡುಪಿಯಲ್ಲಿ ಹಾಗೂ ವೆಯ್ಟ್‌ಲಿಫ್ಟಿಂಗ್, ಶಟಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಫುಟ್‌ಬಾಲ್, ಕರಾಟೆ ಸ್ಪರ್ಧೆಗಳನ್ನು ದ.ಕ. ಜಿಲ್ಲೆಯಲ್ಲಿ ಸಂಘಟಿಸಲಾಗುತ್ತಿದೆ.
ದ.ಕ ಜಿಲ್ಲೆಯ ನೆಹರೂ ಮೈದಾನಲ್ಲಿ ಸೆ.27ರಂದು ಫುಟ್‌ಬಾಲ್ ಪಂದ್ಯ, ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣ ದಲ್ಲಿ ವೆಯ್ಟ್‌ಲಿಫ್ಟಿಂಗ್ ಹಾಗೂ ಕರಾಟೆ ಸ್ಪರ್ಧೆ, ಸೆ.29ರಂದು ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಕಬಡ್ಡಿ, ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಶಟ್ಲ್ ಬ್ಯಾಡ್ಮಿಂಟನ್ ಮತ್ತು ಅ.1ರಂದು ಮಂಗಳಾ ಕ್ರೀಡಾಂಗಣ (ಕರಾವಳಿ ಮೈದಾನ)ದಲ್ಲಿ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿವೆ.
ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟದ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿವೆ. ಉಡುಪಿ ಜಿಲ್ಲೆಯಿಂದ ಭಾಗವಹಿಸುವ ಕ್ರೀಡಾಪಟುಗಳು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿದ ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳೊಂದಿಗೆ ನಿಗದಿತ ದಿನಾಂಕದಂದು ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಕಚೇರಿಯ ದೂರವಾಣಿ ಸಂಖ್ಯೆ:0820-2521324ನ್ನು ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.






