ಸೈಬರ್ ವಂಚಕರಿಂದ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಕಾರ್ಕಳ, ಸೆ.22: ಸೈಬರ್ ವಂಚಕರು ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಸಾವಿರಾರು ರೂ. ಹಣವನ್ನು ವರ್ಗಾವಣೆ ಮಾಡಿ ವಂಚಿಸಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧರ್ಮರಾಜ ಭಂಗ ಎಂಬವರಿಗೆ ಸೆ.15ರಂದು ಅಪರಿಚಿತ ಕರೆ ಮಾಡಿ, ನೀವು ಖಾತೆ ಹೊಂದಿರುವ ಹತ್ತಿರದ ಬ್ಯಾಂಕಿಗೆ ಹೋಗಿ ವಿಚಾರಿಸಿ ಎಂದು ತಿಳಿಸಿದ್ದು ಅದರಂತೆ ಧರ್ಮರಾಜ ಮೊಬೈಲ್‌ನಲ್ಲಿರುವ ಪೋನ್ ಪೇಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ ಎಲ್ಲ 96,000ರೂ. ಕಡಿತಗೊಂಡಿರುವುದು ಕಂಡು ಬಂದಿದೆ.
ಧರ್ಮರಾಜ ಅವರ ಖಾತೆಯಲ್ಲಿದ್ದ ಹಣವನ್ನು ಯಾರೋ ಅಪರಿಚಿತ ಸೈಬರ್ ವಂಚಕರು ಆನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿರುವುದಾಗಿ ದೂರಲಾಗಿದೆ.
Next Story




