ಮೆಸ್ಕಾಂ ತಲ್ಲೂರು ಉಪವಿಭಾಗದ ಜನಸಂಪರ್ಕ ಸಭೆ

ಕುಂದಾಪುರ, ಸೆ.25: ಮೆಸ್ಕಾಂ ತಲ್ಲೂರು ಉಪವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆ ಮೆಸ್ಕಾಂ ತಲ್ಲೂರು ಉಪವಿಭಾಗ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ಮೆಸ್ಕಾಂ ಉಡುಪಿಯ ಅಧೀಕ್ಷಕ ಇಂಜಿನಿಯರ್(ವಿ) ರಾಕೇಶ ಬಿ. ಗ್ರಾಹಕರಿಂದ ಅಹವಾಲು ಸ್ವೀಕರಿಸಿ ಪರಿಹಾರ ಸೂಚಿಸಿದರು. ತಲ್ಲೂರು ಉಪವಿಭಾಗ ವ್ಯಾಪ್ತಿಯ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಿ, ವಿವಿಧೆಡೆ ಅಗತ್ಯವಿ ರುವ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಲ್ಲೂರು ಗ್ರಾಪಂ ಮಾಜಿ ಸದಸ್ಯರಾದ ಉದಯಕುಮಾರ್ ತಲ್ಲೂರು, ಕೃಷ್ಣ ಪೂಜಾರಿ, ಗ್ರಾಹಕ ಬಿ.ರಾಘವೇಂದ್ರ ಪೈ ಮೊದಲಾದವರು ಅಹವಾಲು ಗಳನ್ನು ಸಲ್ಲಿಸಿ ಚರ್ಚೆ ನಡೆಸಿದರು.
ಕುಂದಾಪುರದ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ ಬಾಬು ಬಿ., ಸಹಾಯಕ ಇಂಜಿನಿಯರ್ ಶಶಿರಾಜ್, ಮೆಸ್ಕಾಂ ಗಂಗೊಳ್ಳಿ ಶಾಖಾಧಿಕಾರಿ ದಿನೇಶ ಶೆಟ್ಟಿ, ನಾಡಾ ಶಾಖಾಧಿಕಾರಿ ವಿಜಯ ಕುಮಾರ್, ವಂಡ್ಸೆ ಶಾಖಾಧಿಕಾರಿ ರಾಜೇಶ್, ಹಿರಿಯ ಸಹಾಯಕ ಉದಯ ಮೊದಲಾದವರು ಉಪಸ್ಥಿತರಿದ್ದರು.
Next Story




