ಮಹಿಳೆ ಸಂಶಯಾಸ್ಪದ ಮೃತ್ಯು; ಪ್ರಕರಣ ದಾಖಲು

ಅಮಾಸೆಬೈಲು, ಸೆ.29: ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಶೇಡಿಮನೆ ಎಂಬಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಪ್ರಕರಣ ದಾಖಲಾಗಿದೆ.
ಮೃತರನ್ನು ಶೇಡಿಮನೆಯ ಸಂತೋಷ್ ಪೂಜಾರಿ ಎಂಬವರ ಪತ್ನಿ ಮಾಲಿನಿ(27) ಎಂದು ಗುರುತಿಸಲಾಗಿದೆ. ಇವರು ಪತಿಯೊಂದಿಗೆ ಜಗಳ ಆಡಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಮೃತರ ಮನೆಯವರು ಆಕೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story




