ಕೋಳಿಅಂಕಕ್ಕೆ ದಾಳಿ: ಇಬ್ಬರ ಬಂಧನ

ಹೆಬ್ರಿ, ಸೆ.30: ವರಂಗ ಗ್ರಾಮದ ತಲಮನೆ ಎಂಬಲ್ಲಿ ಸೆ.29ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಅಶೋಕ ಮತ್ತು ಪ್ರಶಾಂತ ಎಂಬವರನ್ನು ವಶಕ್ಕೆ ಪಡೆದಿದ್ದು ಇವರಿಂದ 8000ರೂ. ಮೌಲ್ಯದ 8 ಕೋಳಿ ಹುಂಜ, 2 ಕೋಳಿ ಬಾಳು, 1000ರೂ. ನಗದು ವಶಪಡಿಸಿಕೊಂಡಿ ದ್ದಾರೆ. ದಾಳಿ ವೇಳೆ ಸುರೇಶ್ ಮುದ್ರಾಡಿ, ಪ್ರಭಾಕರ ಸುವರ್ಣ ಶೇಣೆರಬೆಟ್ಟು ಸಂತೋಷ್ ಪೂಜಾರಿ ಅಜೆರ್ಕಾ, ಸುರೇಶ್ ಮಾಳ , ಪ್ರಸನ್ನ ಮುದ್ರಾಡಿ, ನಾರಾಯಣ ಶೆಟ್ಟಿ ಹೆಬ್ರಿ, ಪವನ್ ಕಾಡುಹೊಳೆ, ಮಂಜುನಾಥ ಹಿರಿಯಡ್ಕ, ಅನಿಲ್ ಪೆರ್ಡೂರು, ಕೌಶಿಕ ಮುದ್ರಾಡಿ, ನಿತೀನ್ ಹೆಬ್ರಿ, ಸುಮಿತ್ ಪೆರ್ಡೂರು, ಕರುಣಾಕರ ಶಿವಪುರ, ಸಂತೋಷ್ ವರಂಗ, ಶರತ್ ಪೆರ್ಡೂರು, ರಮಾನಂದ ಹರಿಖಂಡಿಗೆ, ಭಾಸ್ಕರ ಬಚ್ಚಪ್ಪು ರವಿ ಎಂಬವರು ಪರಾರಿಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರದ 2ನೇ ಕ್ರಾಸ್ ಬಳಿ ಸೆ.29ರಂದು ಕೋಳಿ ಅಂಕ ನಡೆಸುತ್ತಿದ್ದ ನಂದಕಿಶೋರ್, ಶುಭತ್, ಮಹೇಶ್, ಆರ್ಥಿಕ್, ಪಾಂಡುರಂಗ ನಾಯ್ಕ್ ಎಂಬವರನ್ನು ಪೊಲೀಸರು ಬಂಧಿಸಿ, 3500ರೂ. ನಗದು, 3 ಜೀವಂತ ಕೋಳಿಗಳು ,2 ಕೋಳಿಯ ಬಾಳು, 4 ಮೊಬೈಲ್ ಪೋನ್, ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




