Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಪಯೋಗಕ್ಕಿಲ್ಲದ ಕುಂದಾಪುರ ನೆಹರೂ ಮೈದಾನದ...

ಉಪಯೋಗಕ್ಕಿಲ್ಲದ ಕುಂದಾಪುರ ನೆಹರೂ ಮೈದಾನದ ರಂಗಮಂದಿರ!

ವಾರ್ತಾಭಾರತಿವಾರ್ತಾಭಾರತಿ3 Oct 2026 7:12 PM IST
share
ಉಪಯೋಗಕ್ಕಿಲ್ಲದ ಕುಂದಾಪುರ ನೆಹರೂ ಮೈದಾನದ ರಂಗಮಂದಿರ!

ಕುಂದಾಪುರ, ಅ.3: ನಗರದ ಹೃದಯ ಭಾಗದಲ್ಲೇ ಇರುವ ನೆಹರೂ ಮೈದಾನದಲ್ಲಿ ಕುಂದಾಪುರ ಪುರಸಭೆಯ ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ ಎರಡು ದಶಕಗಳ ಹಿಂದೆ ಪುರಸಭೆ ವತಿಯಿಂದ ನಿರ್ಮಿಸಿದ ರಂಗ ಮಂದಿರವೂ ಉಪಯೋಗವಿಲ್ಲದಂತಾಗಿದೆ. ರಂಗ ಮಂದಿರದ ಸುತ್ತಲೂ ಗಿಡಗಂಟಿ, ಪೊದೆ ಅವರಿಸಿದ್ದು ಎದುರಿನ ಸಿಮೆಂಟ್ ಮಾಡು ಕುಸಿದಿದೆ. ಅಲ್ಲದೆ ಕಟ್ಟಡ ಶಿಥೀಲವಾಗಿದೆ.

ಯಕ್ಷಗಾನ, ಸಾಂಸ್ಕೃತಿಕ ಚಟುವಟಿಕೆ, ಸಭೆ- ಸಮಾರಂಭಗಳಿಗೆ ಸಾರ್ವಜನಿಕರಿಗೆ ಪ್ರಯೋಜನ ಆಗಬೇಕಿದ್ದ ಸರಕಾರಿ ವೇದಿಕೆಯು ಮೂಲೆ ಗುಂಪಾಗುತ್ತಿರುವುದಕ್ಕೆ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

2005- 06 ನೇ ಸಾಲಿನಲ್ಲಿ ಆಗಿನ ವಿಧಾನ ಪರಿಷತ್ ಸದಸ್ಯೆ ದಿ| ವಿನ್ನಿಫ್ರೆಡ್ ಫೆರ್ನಾಂಡಿಸ್ ತಮ್ಮ ಪ್ರದೇಶಾಭಿ ವೃದ್ಧಿ ನಿಧಿಯಿಂದ ಒದಗಿಸಿದ ಅನುದಾನದಡಿ ರಂಗ ಮಂದಿರ ನಿರ್ಮಾಣಗೊಂಡಿತ್ತು. ಆರಂಭದ ದಿನಗಳಲ್ಲಿ ಕೆಲವೊಂದು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಈ ರಂಗಮಂದಿರ ಬಳಕೆಯಿಲ್ಲದೆ ಬದಿಗೆ ಸರಿಯಿತು.

ಕಳೆದೊಂದು ದಶಕದಿಂದ ಸಂಪೂರ್ಣ ನಿಷ್ಪ್ರಯೋಜಕವಾದಂತಿದೆ. ಹಿರಿಯ ನಾಗರಿಕರ ವೇದಿಕೆಯ ಬಳಕೆಗೆ ನೀಡಬೇಕೆಂಬ ನಿರ್ಣಯವು ಕೈಗೊಡಲಿಲ್ಲ. ಸದ್ಯ ಕಟ್ಟಡ ಪಾಳುಬಿದ್ದಿದೆ. ಸುಣ್ಣಬಣ್ಣ ಕಾಣದೆ ಹಲವು ವರ್ಷಗಳಾಗಿವೆ. ಮಂದಿರದ ಸುತ್ತಲೂ ಗಿಡಮರ, ಪೊದೆ ಬೆಳೆದು ನಿಂತಿವೆ. ಅದನ್ನು ಸಹ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಆರೋಪ ಸಾರ್ವಜನಿಕ ವಲಯದ್ದಾಗಿದೆ.

ರಂಗಮಂದಿರದ ಈ ಕಟ್ಟಡವು ಈಗ ನಿರ್ಗತಿಕರು, ವಲಸೆ ಕಾರ್ಮಿಕರ ಬೀಡಾಗಿದೆ. ಕತ್ತಲೆಯಲ್ಲಿ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗುತ್ತಿದೆ ಎಂಬ ಆರೋಪವಿದೆ. ಪಕ್ಕದಲ್ಲೇ ಸರಕಾರಿ ಪ್ರೌಢಶಾಲೆ, ಆಶ್ರಮ ಶಾಲೆಯಿದ್ದು ಪಾಳುಬಿದ್ದ ಕಟ್ಟಡವು ಉತ್ತಮ ಶೈಕ್ಷಣಿಕ ವಾತಾವರಣ ಹಾಳುಗಡೆಡವುತ್ತಿದೆ.

ಇದನ್ನು ಪುರಸಭೆಯು ಸರಿಯಾಗಿ ನಿರ್ವಹಣೆ ಮಾಡಿಕೊಂಡು, ಸುಸ್ಥಿಯಲ್ಲಿಟ್ಟುಕೊಂಡಿದ್ದರೆ ಸಾರ್ವಜನಿಕರ ಸಭೆ- ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೆ, ಈ ನೆಹರೂ ಮೈದಾನದ ಬಳಿಯೇ ಇರುವಂತಹ ಸರಕಾರಿ ಪ್ರೌಢಶಾಲೆ, ವಡೇರಹೋಬಳಿಯ ಶಾಸಕರ ಮಾದರಿ ಶಾಲೆ, ಆಶ್ರಮ ಶಾಲೆ, ಹಾಸ್ಟೆಲ್ ಗಳ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಆಗುತ್ತಿತ್ತು. ಆದರೆ ಈಗ ಪಾಳು ಬಿದ್ದು, ಯಾರಿಗೂ ಪ್ರಯೋಜನಕ್ಕೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಸ್ತುತ ನೆಹರೂ ಮೈದಾನದ ಈ ರಂಗಮಂದಿರವು ಯಾವುದೇ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿಲ್ಲ. ಅದರ ಅಭಿವೃದ್ಧಿಗೆ ಅನುದಾನ ಬೇಕಾಗಿದೆ. ಆದರೆ ಈಗ ಯಾರಿಗಾದರೂ ಕಾರ್ಯಕ್ರಮ ನಡೆಸಲು ಕೇಳಿದರೆ ಪುರಸಭೆ ಯಿಂದ ಆ ಪರಿಸರ ಸ್ವಚ್ಛಗೊಳಿಸಿ, ಸುಣ್ಣ- ಬಣ್ಣ ಮಾಡಿ, ಬಳಸಲು ಅನುವು ಮಾಡಿಕೊಡಲಾಗುವುದು.

-ಆನಂದ ಜೆ., ಮುಖ್ಯಾಧಿಕಾರಿಗಳು, ಕುಂದಾಪುರ ಪುರಸಭೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X