ಗಾಯಕಿ ಎಸ್.ಜಾನಕಿ ಅವರ ಗಾನ ಸ್ಮರಣೆ ಕಾರ್ಯಕ್ರಮ

ಉಡುಪಿ, ಅ.4: ಉಡುಪಿಯ ಕೊಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಆಶ್ರಯದಲ್ಲಿ ಕರ್ಣಾಟಕ ಬ್ಯಾಂಕಿನ ಪ್ರಧಾನ ಪ್ರಾಯೊಜಕತ್ವದಲ್ಲಿ ಪ್ರಸಿದ್ಧ ಸಂಗಿತ ಕಲಾವಿದರ ಕೂಡುವಿಕೆಯೊಂದಿಗೆ ಇತ್ತಿಚೆಗೆ ನಿಧನ ಹೊಂದಿದ ಗಾಯಕಿ ಎಸ್.ಜಾನಕಿ ಅವರ ಗಾನ ಸ್ಮರಣೆಯ ‘ಜಾನಕಿ ನಮನ’ ಕಾರ್ಯಕ್ರಮ ಇತ್ತೀಚೆಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ಆರ್‌ಜಿಎಂ ರಮೆಶ್ ವೈದ್ಯ ಮತ್ತು ರಾಜ್ಯ ಹೆಚ್ಚುವರಿ ಅಡ್ವೊಕೆಟ್ ಜನರಲ್ ಅರವಿಂದ ಕಾಮತ್ ಉದ್ಘಾಟಿಸಿದರು. ಕೊಸ್ಟಲ್ ಸ್ಟಾರ್ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಕಾಮತ್, ಸಹ ಸಂಸ್ಥಾಪಕರಾದ ವೆಂಕಟೆಶ್ ಕಾಮತ್, ವಂದಿತಾ ಕಾಮತ್ ಸಹಕರಿಸಿದರು.
ವಿಶ್ವ ದಾಖಲೆಯ ಸಂಗಿತ ಕಲಾವಿದೆ ಸಂಗಿತಾ ಬಾಲಚಂದ್ರ, ಸರಿಗಮಪ ಜ್ಯೂರಿ ಖ್ಯಾತಿಯ ಮಾಲಿನಿ ಕೇಶವ ಪ್ರಸಾದ್, ಗಣೆಶ್ ಕಾರಂತ್, ಗೌರವ್ ಕಾಮತ್, ರಿಷಿಕಾ ಮೂಡ್ಲಕಟ್ಟೆ ಹಾಗೂ ರಮ್ಯಾ ಸುಧಿಂದ್ರ, ಸ್ವಾತಿ ಅರವಿಂದ್, ಶ್ರುತಿ ವೈದ್ಯ ಸಹಿತ ಕನ್ನಡ ನಾಡಿನ ಗಾಯಕಿ ಮತ್ತು ಗಾಯಕರು ಹಾಗೂ ಹಿನ್ನೆಲೆ ಸಂಗಿತ ಕಲಾವಿದರು ಸತತ ಮೂರು ಗಂಟೆಗಳ ಕಾಲ ಎಸ್.ಜಾನಕಿಯವರು ಹಾಡಿದ ಚಿರಸ್ಥಾಯಿಯಾಗಿರುವ ಹಲವಾರು ಹಾಡುಗಳನ್ನು ಹಾಡಿ ದರು. ಹಿನ್ನೆಲೆಯಲ್ಲಿ ಸಂಗಿತ ಕಲಾವಿದರಾದ ರಾಜೆಶ್ ಭಾಗವತ್, ರಾಜ ಗೊಪಾಲ್, ಗುರುರಾಜ್, ಪ್ರತಾಪ್ ಆಚಾರ್ಯ, ವರ್ಷಾ ಆಚಾರ್ಯ ಗಾನ ಸುಧೆಯನ್ನು ಹೊಮ್ಮಿಸಿದರು.






