ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ: ಸಾಧಕರಿಗೆ ಸನ್ಮಾನ

ಕಾಪು, ಅ.5: ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಕಾಪು ಪ್ರಥಮ ದರ್ಜೆ ಕಾಲೇಜಿನ ಡಾ..ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಜರಗಿತು.
ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾಧ್ಯಕ್ಷ ಕಸಾಪ ನೀಲಾವರ ಸುರೇಂದ್ರ ಅಡಿಗ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರುಗಳಾದ ಸೂರಿ ಶೆಟ್ಟಿ ಕಾಪು, ಮಾಧವ ಕಾಮತ್ ಬಂಟಕಲ್ಲು, ಪಾಲಮೆ ಗೋಪಾಲ ರಾವ್, ಸುಧಾಕರ ಸಾಲಿಯಾನ್, ಜಯಂತಿ ಮೆಂಡನ್ ಕಾಪು, ಮೋಹನದಾಸ್ ಜಿ.ಕಿಣಿ ಕಾಪು, ವಿಷ್ಣುಮೂರ್ತಿ, ಶಶಿಧರ ವಾಗ್ಲೆ ಸಡಂಬೈಲು, ರಾಕೇಶ್ ಕುಂಜೂರು, ಹನುಮಂತ ಎರ್ಮಾಳ್, ವಿಠಲ ಆಚಾರ್ಯ ಶಿರ್ವ ಪದವು, ಕಾಪು ಅಕ್ಬರ್ ಸಾಹೇಬ್, ಗುರುವ ಕಾಪು ಅವರನ್ನು ಅದಾನಿ ಯುಪಿಸಿಎಲ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ ಸನ್ಮಾನಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಡಾ.ವೈ.ಎನ್.ಶೆಟ್ಟಿ ಪ್ರತಿಸ್ಪಂಧನೆಯ ನುಡಿಗಳನ್ನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಎಲ್ಲೂರು ರವೀಂದ್ರನಾಥ್ ರಾವ್ ಎಲ್ಲೂರು ಸಮಾರೋಪ ಭಾಷಣ ಮಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಪಡುಬಿದ್ರಿ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಗೋಪಾಲಕೃಷ್ಣ ಗಾಂವ್ಕರ್, ಜಿಲ್ಲಾ ಸುತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ, ಕೋಶಾಧಿಕಾರಿ ವಿದ್ಯಾಧರ್ ಪುರಾಣಿಕ್, ಸಂಘಟನಾ ಕಾರ್ಯದರ್ಶಿಗಳಾದ ದೀಪಕ್ ಬೀರ, ಕೆ.ಆರ್.ಪಾಟ್ಕರ್ ವೇದಿಕೆಯಲ್ಲಿದ್ದರು.
ಕಸಾಪ ಸಹಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಸ್ವಾಗತಿಸಿದರು. ದೇವದಾಸ ಪಾಟ್ಕರ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.






