ಲಾರಿಗೆ ಬೈಕ್ ಢಿಕ್ಕಿ: ಸವಾರ ಮೃತ್ಯು

ಕಾರ್ಕಳ, ಅ.5: ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರೊಬ್ಬರು ಮೃತಪಟ್ಟ ಘಟನೆ ಅ.4ರಂದು ಸಂಜೆ ವೇಳೆ ಸಾಣೂರು ಗ್ರಾಮದ ಪುಲ್ಕೇರಿಯ ಪಡುತಿರುಪತಿ ಪೆಟ್ರೋಲ್ ಪಂಪು ಬಳಿ ನಡೆದಿದೆ.
ಮೃತರನ್ನು ವಿಘ್ನೇಶ ಆಚಾರ್ಯ(25) ಎಂದು ಗುರುತಿಸಲಾಗಿದೆ. ನಿಟ್ಟೆ ಕಡೆಯಿಂದ ಪುಲ್ಕೇರಿ ಕಡೆಗೆ ಹೋಗುತ್ತಿದ್ದ ಬೈಕ್, ಎದುರಿನಲ್ಲಿ ಹೋಗುತ್ತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕ್ ಸವಾರ ವಿಘ್ನೇಶ ಆಚಾರ್ಯ ಗಂಭೀರವಾಗಿ ಗಾಯಗೊಂಡು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




