ಅಂಗಡಿ ಮಾಲಕನ ಚಿನ್ನದ ಸರ ಸುಲಿಗೆ: ಪ್ರಕರಣ ದಾಖಲು

ಮಲ್ಪೆ, ಅ.5: ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ಅಂಗಡಿ ಮಾಲಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಮಲ್ಪೆ ಕಡವಿನ ಬಾಗಿಲ ವಿಠೋಭ ರುಖುಮಾಯಿ ಭಜನಾ ಮಂದಿರ ಹತ್ತಿರ ಅ.4ರಂದು ಮಧ್ಯಾಹ್ನ ವೇಳೆ ನಡೆದಿದೆ.
ವಿಠಲ ಸುವರ್ಣ(76) ಎಂಬವರ ಅಂಗಡಿಗೆ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದಿದ್ದು, ಅದರಲ್ಲಿ ಒಬ್ಬಾತ ಅಂಗಡಿಗೆ ಬಂದು ವಿಮಲ್ ಕೊಡಿ ಎಂದು ಹೇಳಿ ವಿಠಲ ಸುವರ್ಣ ಅವರನ್ನು ಒತ್ತಿ ಹಿಡಿದು ಕುತ್ತಿಗೆಯಲ್ಲಿದ್ದ ಒಂದೂವರೆ ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿ ಬೈಕ್‌ನಲ್ಲಿ ಪರಾರಿಯಾದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story




