ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

ಮಲ್ಪೆ, ಅ.8: 20ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಕೆಲಸ ಮಾಡಿಕೊಂಡಿದ್ದ ಹೊನ್ನಾವರದ ಕರ್ಕೆ ಗ್ರಾಮದ ಪ್ರಮೋದ ವಿದ್ಯಾದರ ಗೌಡ ಎಂಬವರು ಅ.3ರಂದು ರಾತ್ರಿ ಮೀನುಗಾರಿಕೆಗೆ ಹೋದಾಗ ಅಕಸ್ಮಿಕವಾಗಿ ಸಮುದ್ರಕ್ಕೆ ಹೋಗಿ ನಾಪತ್ತೆಯಾಗಿದ್ದು, ಅ.7ರಂದು ಸಂಜೆ ಕುಂದಾಪುರ ಕೋಡಿ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಇದೀಗ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




