ಮೂಡ್ಲಕಟ್ಟೆ: ಓರಿಯೆಂಟೇಷನ್ ಕಾರ್ಯಕ್ರಮ

ಕುಂದಾಪುರ, ಅ.9: ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆರೋಗ್ಯ ವಿಜ್ಞಾನ ವಿಭಾಗದ ಕೋರ್ಸುಗಳ ಓರಿಯೆಂಟೇಷನ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಎಸ್ಸಿ ನರ್ಸಿಂಗ್‌ನ 7ನೇ ಬ್ಯಾಚ್, ಅಲೈಡ್ ಹೆಲ್ತ್ ಸೈನ್ಸಸ್‌ನ 3ನೇ ಬ್ಯಾಚ್ ಹಾಗೂ ಫಿಸಿಯೋಥೆರಪಿಯ 2ನೇ ಬ್ಯಾಚ್‌ಗಳನ್ನು ಉದ್ಘಾಟಿಸಿದ ಪ್ರೊ.ಡಾ.ಮೊಹಮ್ಮದ್ ಸುಹೈಲ್, ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರತೆ, ಮಾನವೀಯತೆ, ಸಮರ್ಪಣೆ ಹಾಗೂ ಬದ್ಧತೆಯ ಮಹತ್ವವನ್ನು ತಿಳಿಸಿದರು.
ಸಮರ್ಥ ಹಾಗೂ ಮಾನವೀಯ ಗುಣಗಳನ್ನು ಹೊಂದಿರುವ ಆರೋಗ್ಯ ವೃತ್ತಿಪರರನ್ನು ರೂಪಿಸುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಕಲಿಕಾ ವಾತಾವರಣ ವನ್ನು ಒದಗಿಸುತ್ತಿರುವ ಐಎಂಜೆ ಸಂಸ್ಥೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಐಎಂಜೆ ಸಂಸ್ಥೆಗಳ ಅಕಾಡೆಮಿಕ್ಸ್ ನಿರ್ದೇಶಕ ಡಾ. ಎಸ್.ಎನ್.ಭಟ್ ವಹಿಸಿದ್ದರು. ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲೆ ಪ್ರೊ.ಹೇಮಲತಾ ಉಪಸ್ಥಿತರಿದ್ದರು.
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಪ್ರೊ.ಜೆನ್ನಿಫರ್ ಫ್ರೀಡಾ ಮೆನೆಜಸ್ ಸ್ವಾಗತಿಸಿದರು. ಪ್ರೊ.ಹೇಮಲತಾ ವಂದಿಸಿದರು. ಸುಷ್ಮಾ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.




