‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರಕ್ಕೆ’ ಹಿರಿಯ ಸಾಹಿತಿಗಳ ಆಯ್ಕೆ

ರಾಮೇಗೌಡ, ಇಂದಿರಾ, ಜಯಪ್ರಕಾಶ್
ಉಡುಪಿ, ಅ.12: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ನೀಡುವ ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2026ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ(ಸಮಗ್ರ ಸಾಹಿತ್ಯ), ಉಡುಪಿಯ ಹಿರಿಯ ಸಾಹಿತಿ ಇಂದಿರಾ ಹಾಲಂಬಿ(ಮಕ್ಕಳ ಸಾಹಿತ್ಯ), ಡಿಆರ್ಡಿಓ ಮುಖ್ಯ ಸಂಪರ್ಕ ಅಧಿಕಾರಿ ಮೈಸೂರಿನ ಜಯಪ್ರಕಾಶ್ ಪುತ್ತೂರು(ಅನುವಾದ ಸಾಹಿತ್ಯ ) ಅವರಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನ.8ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕ, ನಗದು 5,000 ದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2026’ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಸಂಚಾಲಕಿ ಸಂಧ್ಯಾ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story




