ದನ ಕಳವಿಗೆ ಯತ್ನ: ಕಾರು ಬಿಟ್ಟು ಪರಾರಿ

ಕುಂದಾಪುರ, ಅ.16: ವಾಲ್ತೂರು ಕೊಕ್ಕೋಡಿಗೆ ಹೋಗುವ ದಾರಿಯ ಬಳಿ ಗೇರು ಹಾಡಿಯಲ್ಲಿ ಮೇಯುತ್ತಿದ್ದ ದನವನ್ನು ದುಷ್ಕರ್ಮಿಗಳು ಕಳವಿಗೆ ಯತ್ನಿಸಿ, ಕಾರು ಬಿಟ್ಟು ಪರಾರಿಯಾಗಿ ರುವ ಘಟನೆ ಅ.15ರಂದು ಮಧ್ಯಾಹ್ನ ವೇಳೆ ನಡೆದಿದೆ.
ಕಾವ್ರಾಡಿ ಗ್ರಾಮದ ಪ್ರಕಾಶ್ ಎಂಬವರ ದನವನ್ನು ಆರೋಪಿಗಳಾದ ಇಮ್ತಿಯಾಝ್, ರಿಜ್ವಾನ್ ದಸ್ತಗೀರ್ ಮತ್ತು ಜಿಮಾಮ್ ಎಂಬವರು ಕಾರಿಗೆ ತುಂಬಿಸಲು ಎಳೆದುಕೊಂಡು ಹೋಗಿ ಕಳವಿಗೆ ಯತ್ನಿಸುತ್ತಿದ್ದು, ಈ ವೇಳೆ ವ್ಯಕ್ತಿಯನ್ನು ನೋಡಿ ಆರೋಪಿಗಳು ದನವನ್ನು ಬಿಟ್ಟು ಕಾರು ಮತ್ತು ಸ್ಕೂಟರ್ನಲ್ಲಿ ಪರಾರಿಯಾದರು. ಬಳಿಕ ಸುಮಾರು 2ಕಿ.ಮೀ. ದೂರದ ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರು ರಸ್ತೆಯ ಬದಿಯಲ್ಲಿ ಬಿಟ್ಟು ಸ್ಕೂಟಿಯಲ್ಲಿ ಓಡಿ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




