ಶಿರ್ವ, ಅ.16: ಉದ್ಯಾವರದ ಪಿತ್ರೋಡಿಯಲ್ಲಿರುವ ಮೆಡಿಕಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿರ್ವ ಗ್ರಾಮದ ನಿವಾಸಿ ಜಯಲಕ್ಷ್ಮೀ ಎಂಬವರ ಮಗ ಸಾಹಿಲ್ ಎಸ್.ಆಚಾರ್ಯ(26) ಎಂಬವರು ಅ.14ರಂದು ಬೆಳಗ್ಗೆ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.