ಕೊಲ್ಲೂರು | ದೇವಸ್ಥಾನದ ಮೇಲಿನಿಂದ ಬಿದ್ದು ಶಿಲ್ಪಿ ಮೃತ್ಯು

ಕೊಲ್ಲೂರು, ಅ.17: ವಂಡ್ಸೆ ಗ್ರಾಮದ ಕಂಬಳಗದ್ದೆ ಬಳಿ ನಿರ್ಮಾಣ ಹಂತದ ದೇವಸ್ಥಾನದ ಮೇಲಿನಿಂದ ಬಿದ್ದು ಶಿಲ್ಪಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕುಕ್ಕಂದೂರು ಗ್ರಾಮದ ಶಿವ ಎಂಬವರ ಮಗ ಶರತ್ ಕುಮಾರ್(30) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದು ತಿಂಗಳಿನಿಂದ ದೇವಸ್ಥಾನದ ಶಿಲ್ಪಿ ಕೆಲಸ ಮಾಡಿಕೊಂಡಿದ್ದು, ಅ.16ರಂದು ಸಂಜೆ 4:30ರ ಸುಮಾರಿಗೆ ಕೆಲಸ ಮಾಡುತ್ತಿರುವಾಗ ಇವರು ಆಯತಪ್ಪಿ ನಿರ್ಮಾಣ ಹಂತದ ದೇವಸ್ಥಾನದ ಮೇಲಿನಿಂದ ಕೆಳಗೆ ಬಿದ್ದರು.
ಇದರಿಂದ ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶರತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




