ಉಡುಪಿ ಜಿಲ್ಲಾ ಜಮಾಅತ್ ಬಂಧುಗಳ ಸಭೆ

ಉಡುಪಿ: ಕುರಾನ್ ಬೋಧನೆಗಳು ಮತ್ತು ಪ್ರವಾದಿ ಮುಹಮ್ಮದ್ ಸ.ರವರ ಚರ್ಯೆಯ ಮೂಲಕ ಸಮಾಜದಲ್ಲಿ ಸಂತುಲಿತ ಜೀವನ ಸಾಗಿಸಲು ಸಾಧ್ಯವಿದೆ. ಇಂತಹ ಸಮಾಜ ನಿರ್ಮಿಸಲು ಜಮಾಅತ್‌ನ ಕಾರ್ಯಕರ್ತರು ಕಟಿ ಬದ್ಧರಾಗಿರಬೇಕು ಎಂದು ಜಮಾ ಆತೆ ಇಸ್ಲಾಮಿ ಹಿಂದ್‌ನ ರಾಜ್ಯಾಧ್ಯಕ್ಷ ಡಾ.ಸಾದ್ ಬೆಳ್ಗಾಮಿ ಹೇಳಿದ್ದಾರೆ.
ಉಡುಪಿ ಜಾಮಿಯಾ ಮಸೀದಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಜಮಾಅತ್‌ನ ಸದಸ್ಯರು, ಕಾರ್ಯಕರ್ತರು, ಎಸ್‌ಐಓ, ಜಿಐಓ, ಸಾಲಿಡಾರಿಟಿ, ಮಹಿಳಾ ವಿಭಾಗ ಮತ್ತು ವಿವಿಧ ಅಂಗ ಸಂಸ್ಥೆಗಳ ಜಮಾಅತ್ ಬಂಧುಗಳನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಲ್ಡ್ರನ್ಸ್ ಇಸ್ಲಾಮಿಕ್ ಆರ್ಗನೈಯೇಶನ್‌ನ ಜಿಲ್ಲಾ ಹೊಣೆಗಾರರಾದ ಮೆಹರುನ್ನೀಸಾ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಯೇಶನ್‌ನ ಜಿಲ್ಲಾ ಹೊಣೆಗಾರರಾದ ನುಜ್ಲಾ ಫಾತಿಮಾ, ಐಟಾದ ಜಿಲ್ಲಾ ಹೊಣೆಗಾರ ಅಸ್ಲಮ್ ಹೈಕಾಡಿ, ಸಾಲಿಡಾರಿಟಿ ಜಿಲ್ಲಾ ಹೊಣೆಗಾರ ಆಫ್ವಾನ್ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಸಾಲಿಡಾರಿಟಿ ವತಿಯಿಂದ ನ.7ರಂದು ಉಡುಪಿ ಟೌನ್ ಹಾಲ್‌ನಲ್ಲಿ ನಡೆಯುವ ಸಮಾವೇಶದ ಪೋಸ್ಟರ್‌ನ್ನು ಬಿಡುಗಡೆ ಗೊಳಿಸಲಾಯಿತು.
ವೇದಿಕೆಯಲ್ಲಿ ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಉಪಸ್ಥಿತರಿದ್ದರು. ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕುರಾನ್ ಪಠಿಸಿದರು. ಜಿಲ್ಲಾ ಸಂಚಾಲಕ ಡಾ.ಅಬ್ದುಲ್ ಅಜೀಝ್ ಸ್ವಾಗತಿಸಿ ವಂದಿಸಿದರು.






