ಪತ್ನಿಯ ಮನೆಯಲ್ಲಿ ಸಹೋದರ ಮೃತ್ಯು: ಸಾವಿನ ಬಗ್ಗೆ ಸಂಶಯ; ಪ್ರಕರಣ ದಾಖಲು

ಕೋಟ, ಅ.19: ಪತ್ನಿಯ ಮನೆಯಲ್ಲಿ ನಡೆದ ಗಲಾಟೆಯಿಂದ ಸಹೋದರ ಮೃತಪಟ್ಟಿರುವ ಬಗ್ಗೆ ಸಂಶಯ ಇರುವುದಾಗಿ ಸಹೋದರಿ ಕೋಟತಟ್ಟು ಗ್ರಾಮದ ಬಲ್ಕೀಸ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ಇಕ್ಬಾಲ್ ಎಂಬವರು ಕಳೆದ ಒಂದು ವರ್ಷಗಳಿಂದ ಆತನ ಹೆಂಡತಿ ಮನೆಯಾದ ಪಾರಂಪಳ್ಳಿ ಗ್ರಾಮದ ಬೀಚ್ ಬಳಿಯ ಮನೆಯಲ್ಲಿ ವಾಸವಾಗಿದ್ದರು. ಮೊಹಮ್ಮದ್ ಇಕ್ಬಾಲ್ ಮನೆಗೆ ಬಂದಾಗ ಪದೇ ಪದೇ ಪತ್ನಿ ಸಫ್ರಾಭಿ ತನ್ನೊಂದಿಗೆ ಗಲಾಟೆ ಮಾಡುತ್ತಿರುವು ದಾಗಿ ನೊಂದು ಹೇಳುತ್ತಿದ್ದನು. ಅ.14ರಂದು ರಾತ್ರಿ ಅಬ್ದುಲ್ ರಝಾಕ್ ಎಂಬವರು ಮನೆಗೆ ಬಂದು ಇಕ್ಬಾಲ್ ಮತ್ತು ಆತನ ಹೆಂಡತಿ ಮನೆಯವರಿಗೂ ಗಲಾಟೆ ನಡೆದಿದೆ ಎಂದು ತಿಳಿಸಿದ್ದರು.
ಬಳಿಕ ಸುಮಾರು ಅರ್ಧ ಗಂಟೆಯ ಬಳಿಕ ಇಕ್ಬಾಲ್ ಮನೆಗೆ ಬಂದಿದ್ದು ಗಲಾಟೆಯಿಂದ ಆತನ ಬನಿಯಾನ್ ಹರಿದಿರುವುದು ಕಂಡು ಬಂದಿದೆ. ಅಲ್ಲದೇ ಈ ಬಗ್ಗೆ ಪೊಲೀಸ್ ದೂರು ಕೊಡುವುದಾಗಿ ತಿಳಿಸಿದ್ದು, ಮನೆಯವರೆಲ್ಲ ದೂರು ನೀಡುವುದು ಬೇಡ ಈ ಬಗ್ಗೆ ಮಾತನಾಡಿ ತೀರ್ಮಾನ ಮಾಡುವುದಾಗಿ ತಿಳಿಸಲಾಗಿತ್ತು ಎಂದು ದೂರಲಾಗಿದೆ.
ಅ.19ರಂದು ಬೆಳಗಿನ ಜಾವ ಮೊಹಮ್ಮದ್ ಇಕ್ಬಾಲ್ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಾಧಿಕಾರಿಯವರಲ್ಲಿ ವಿಚಾರಿಸಿದಾಗ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೊಹಮ್ಮದ್ ಇಕ್ಬಾಲ್ನ ಮನೆಯಲ್ಲಿ ಹಿಂದಿನಂತೆ ಆತನ ಹೆಂಡತಿ ಹಾಗೂ ಹೆಂಡತಿ ಮನೆಯವರು ಗಲಾಟೆ ಮಾಡಿರುವ ಸಾಧ್ಯತೆ ಇದ್ದು ಈತನ ಮರಣದಲ್ಲಿ ಸಂಶಯ ಇರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.






