ಸೇಲ್ಸ್ ಎಕ್ಸ್ಕ್ಯೂಟಿವ್ ನಾಪತ್ತೆ

ಉಡುಪಿ, ಅ.22: ಬೆಂಗಳೂರಿನ ಮಂಗಮ್ಮನಪಾಳ್ಯ ಎಂಬಲ್ಲಿ ವಾಸವಿದ್ದು, ಮಾರತಹಳ್ಳಿಯ ಟಿ.ಟಿ.ಕೆ ಎಂಟರ್ ಪ್ರೈಸಸ್ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮೂಲತಃ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸುನೀರ್ (41) ಎಂಬವರು ಅ.18ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಬೆಂಗಳೂರಿನ ಮನೆಯಿಂದ ಹೋದವರು ಇದುವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 7 ಇಂಚು ಎತ್ತರ, ಸದೃಢ ಶರೀರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ತುಳು ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಛೇರಿ ದೂ.ಸಂಖ್ಯೆ: 08254-251031, ಮೊ.ನಂ:9480805434 ಹಾಗೂ ಕಂಟ್ರೋಲ್ ರೂಂ. 100 (0820- 2526444) ಅನ್ನು ಸಂಪರ್ಕಿಸಬಹುದು ಎಂದು ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
Next Story




