ಕೊಡವೂರು: ಬ್ರಹ್ಮಕಲಶೋತ್ಸವ ಪ್ರಚಾರ ಭಿತ್ತಿಪತ್ರ ಬಿಡುಗಡೆ

ಮಲ್ಪೆ, ಅ.23: ಮಹಾತೋಭಾರ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಜ.20ರಂದು ನಡೆಯಲಿ ರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪ್ರಚಾರ ಭಿತ್ತಿಪತ್ರವನ್ನು ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಪವಿತ್ರಪಾಣಿ ಜನಾರ್ದನ್ ಕೊಡವೂರು, ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ರಾಜ ಎ.ಸೇರಿಗಾರ್, ವಾದಿರಾಜ ಸಾಲ್ಯಾನ್, ಪ್ರಮುಖರಾದ ಗಣೇಶ್, ವಿಜಯ ಎಂ.ಬಂಗೇರ, ಉಮೇಶ್ ರಾವ್, ಪೂರ್ಣಿಮಾ ಜನಾರ್ದನ್ ಮೊದಲಾದವರು ಉಪಸ್ಥಿತರಿದ್ದರು.
Next Story




