ದೇಶದ ಸಾರ್ವಭೌಮತ್ವ ಕಾಪಾಡುವ ಮತದಾನ ಹಕ್ಕು ಕಿತ್ತುಕೊಳ್ಳುವ ಸಂಚು: ಭವ್ಯ ನರಸಿಂಹಮೂರ್ತಿ
ಎಸ್‌ಐಆರ್ ರದ್ಧತಿ, ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ

ಉಡುಪಿ, ಅ.23: ಮತದಾನ ಹಕ್ಕು ಎಂಬುದು ನಮ್ಮ ದೇಶದ ಸಾರ್ವ ಭೌಮತ್ವವನ್ನು ಕಾಪಾಡುತ್ತಿದೆ. ಮತದಾನ ಹಕ್ಕಿನಲ್ಲಿ ಮಾತ್ರ ನಾವೆಲ್ಲರೂ ಸಮಾನರು. ಈಗ ಆ ಹಕ್ಕನ್ನು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ. ಆ ಹಕ್ಕು ಇಲ್ಲದಿದ್ದರೆ ನಮ್ಮ ಭವಿಷ್ಯನೇ ಇರುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ ಹೇಳಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಅಕ್ರಮ ಎಸ್‌ಐಆರ್‌ನ್ನು ರದ್ದುಗೊಳಿಸು ವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಯನ್ನು ಆಗ್ರಹಿಸಿ ಸಹಬಾಳ್ವೆ ಉಡುಪಿ ಹಾಗೂ ಸಹಭಾಗಿ ಸಂಘಟನೆ-ಪಕ್ಷಗಳ ಐಕ್ಯ ವೇದಿಕೆಯ ವತಿಯಿಂದ ಉಡುಪಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಮತದಾನ ಹಕ್ಕು ಇರುವುದರಿಂದ ರಾಜಕಾರಣಿಗಳು ಚುನಾವಣೆ ಸಂದರ್ಭ ನಮ್ಮ ಮನೆಬಾಗಿಲಿಗೆ ಬರುತ್ತಾರೆ ಮತ್ತು ಮಹಿಳೆಯರಿಗೆ ಅನೇಕ ಯೋಜನೆಗಳನ್ನು ನೀಡುತ್ತಾರೆ. ಇದೆಲ್ಲವೂ ಎಲ್ಲರಿಗೂ ಸಮಾನವಾಗಿರುವ ಆ ಒಂದೇ ಒಂದು ಮತದಾನದ ಹಕ್ಕುಗಳಿಂದ ಮಾತ್ರ ಸಾಧ್ಯವಾಗುತ್ತಿದೆ ಎಂದ ಅವರು, ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕೆಂಬ ಭಾರತೀಯರ ಭಾವನೆ ಇನ್ನು ಕೂಡ ಜೀವಂತವಾಗಿದೆ ಎಂಬುದಕ್ಕೆ ಈಗ ನಡೆಯುತ್ತಿರುವ ಹೋರಾಟಗಳೇ ಸಾಕ್ಷಿಯಾಗಿದೆ ಎಂದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ನಾವು ಈವರೆಗೆ ಕಾಪಾಡಿಕೊಂಡು ಬಂದ ಪ್ರಜಾಪ್ರಭುತ್ವ, ಸಂವಿಧಾನಿಕ ಮೌಲ್ಯಗಳನ್ನು ಕಳೆದ 12ವರ್ಷಗಳಿಂದ ಕೇಂದ್ರದ ಮೋದಿ ಸರಕಾರ ಒಂದೊಂದಾಗಿ ಧ್ವಂಸ ಮಾಡಿಕೊಂಡು ಬರುತ್ತಿದೆ. ಚುನಾವಣಾ ಆಯೋಗವನ್ನು ಅತ್ಯಂತ ಅಪ್ರಜಾಸತ್ತ ತ್ಮಕವಾಗಿ, ಸಂವಿಧಾನ ವಿರೋಧಿಯಾಗಿ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ಸ್ತಂಭಗಳನ್ನು ಧ್ವಂಸ ಮಾಡಲಾಯಿತು ಎಂದು ದೂರಿದರು.
ಬಿಜೆಪಿಯ ಒಂದೊಂದೆ ಅಕ್ರಮಗಳು ಇಂದು ಜಗಜ್ಜಾಹೀರು ಆಗುತ್ತಿದೆ. ಇದರ ವಿರುದ್ಧ ಜನ ಬೀದಿಗೆ ಇಳಿಯುತ್ತಿ ದ್ದಾರೆ. ಈ ಮೂಲಕ ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಇಂದು ಅತ್ಯಂತ ತೀವ್ರ ಸ್ವರೂಪ ಪಡೆಯು ತ್ತಿದೆ. ಈ ಹೋರಾಟ ದೊಡ್ಡ ಬಿರುಗಾಳಿಯಾಗಿ ಪರಿಣಮಿಸಿದೆ. ಈ ಬಿರುಗಾಳಿ ಜ್ಞಾನೇಶ್ ಕುಮಾರ್ ಮಾತ್ರವಲ್ಲ ಅವರ ಕೃಪಕಟಾಕ್ಷದಿಂದ ಅಕ್ರಮವಾಗಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ ಪ್ರಜಾಸತ್ತತ್ಮಕವಾಗಿಯೇ ಕಿತ್ತು ತೆಗೆದು ಶಮನಗೊಳ್ಳಲಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಹಬಾಳ್ವೆಯ ಅಮೃತ್ ಶೆಣೈ, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಮೌಲಾ, ಭಾರತೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಫಾ.ವಿಲಿಯಂ ಮಾರ್ಟಿಸ್, ಸಿಪಿಎಂ ಮುಖಂಡರಾದ ಸುರೇಶ್ ಕಲ್ಲಾಗರ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಇದ್ರೀಸ್ ಹೂಡೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ಅಫ್ಘಾನ್ ಬಿ.ಹೂಡೆ, ಜಅಮಾತೆ ಇಸ್ಲಾಮ್ ಹಿಂದ್‌ನ ನಿಸಾರ್ ಉಡುಪಿ, ಕಾಂಗ್ರೆಸ್ ಮುಖಂಡರಾದ ಹರಿಪ್ರಸಾದ್ ರೈ, ಎಂ.ಎ.ಗಫೂರ್, ರಮೇಶ್ ಕಾಂಚನ್, ಪ್ರಸಾದ್‌ರಾಜ್ ಕಾಂಚನ್, ಎಸ್‌ಡಿಪಿಐಯ ಮುಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಸಹಬಾಳ್ವೆ ಸಂಚಾಲಕ ಕೆ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರನ್ಹಾ ವಂದಿಸಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮಳೆಯಲ್ಲೂ ಮೊಳಗಿದ ‘ವೋಟ್ ಚೋರ್..’ ಘೋಷಣೆ
ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಕ್ಲಾಕ್ ಟವರ್ ಬಳಿಯ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ ಸಲ್ಲಿಸಿ ಕಾಲ್ನಡಿಗೆ ಮೆರವಣಿಗೆ ಆರಂಭಗೊಂಡಿತು.
ಮೆರವಣಿಗೆ ತ್ರಿವೇಣಿ ವೃತ್ತ, ಕೆ.ಎಂ.ಮಾರ್ಗ, ಹಳೆ ಡಯಾನ ವೃತ್ತ, ಕೋರ್ಟ್ ರಸ್ತೆ ಮಾರ್ಗವಾಗಿ ಜೋಡುಕಟ್ಟೆಯಲ್ಲಿ ಸಮಾಪ್ತಿಗೊಂಡಿತು. ನೂರಾರು ಸಂಖ್ಯೆಯ ಪ್ರತಿಭಟನಕಾರರು ಸುರಿಯುವ ಮಳೆಯಲ್ಲಿಯೇ ಘೋಷಣೆಗಳನ್ನು ಕೂಗುತ್ತ ಸಾಗಿಬಂದರು. ಪ್ರತಿಭಟನೆಯುದ್ದಕ್ಕೂ ವೋಟ್ ಚೋರ್ -ಗದ್ದಿ ಚೋಡ್’ ಘೋಷಣೆ ಮೊಳಗಿತು.
ಪೌರತ್ವದ ಹಕ್ಕು ಕಿತ್ತುಕೊಳ್ಳುವ ಹುನ್ನಾರ
ದೇಶದ 13 ಕೋಟಿ ಬಡವರು, ಮಹಿಳೆಯರು, ದಲಿತ, ಆದಿವಾಸಿ ಹಾಗೂ ಅಲ್ಪ ಸಂಖ್ಯಾತರ ಪೌರತ್ವದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ಹೊಂದಿರುವ ಎಸ್‌ಐಆರ್ ರದ್ಧಾಗಬೇಕು. ಎಸ್‌ಐಆರ್ ಸಂವಿಧಾನಕ್ಕೆ ವಿರುದ್ಧವಾಗಿದೆ. ಚುನಾವಣಾ ಆಯೋಗದ ಸ್ವಯತ್ತತೆಯನ್ನು ನಾಶ ಮಾಡಿ, ಸರ್ವಾಧಿಕಾರಿ ಸರಕಾರದ ಕೈಗೊಂಬೆ ಮಾಡಿರುವು ದಾಗಿದೆ. ಅದನ್ನು ರದ್ದುಗೊಳಿಸುವವರೆಗೆ ಹೋರಾಟ ಮುಂದುವರೆಸಬೇಕಾಗಿದೆ ಎಂದು ಸಹಬಾಳ್ವೆ ಸಂಚಾರ, ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಸರ್ವಾಧಿಕಾರಿ ಸರಕಾರದ ಏಜೆಂಟಾಗಿ ಸ್ವಯತ್ತ ಚುನಾವಣಾ ಆಯೋಗವನ್ನು ಬಡುಮೇಲು ಮಾಡಲು ಯತ್ನಿಸು ತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿ, ತಾನು ಮಾಡಿದ ಈ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕು. ಈ ಎಲ್ಲದಕ್ಕೂ ಮೂಲ ವಾಗಿರುವ 2023ರ ಚುನಾವಣಾ ಆಯುಕ್ತರ ನೇಮಕ ಕಾಯ್ದೆಯಾ ಗಿದೆ. ಅದು ಸಂವಿಧಾನ ವಿರೋಧಿ ಎಂಬುದಕ್ಕೆ ಸುಪ್ರೀಂ ಕೋರ್ಟ್ ತೀರ್ಪುಗಳೇ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.






