ಬೀಜೂರು ಚಂದ್ರಶೇಖರ ಶೆಟ್ಟಿ ನಿಧನ

ಉಡುಪಿ, ಅ.24: ಬಡಗುತಿಟ್ಟಿನ ಸ್ತ್ರೀವೇಷಧಾರಿ ಚಂದ್ರಶೇಖರ ಶೆಟ್ಟಿ (59) ಅವರು ಇತ್ತೀಚೆಗೆ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ತಮ್ಮ ಹದಿನಾಲ್ಕನೆ ವಯಸ್ಸಿಗೆ ಯಕ್ಷಗಾನ ಕ್ಷೇತ್ರ ಪ್ರವೇಶಿಸಿ ನಾಲ್ಕು ದಶಕಗಳ ಕಾಲ ಈ ಕ್ಷೇತ್ರದಲ್ಲಿ ಕಲಾಸೇವೆ ಮಾಡಿರುವ ಚಂದ್ರಶೇಖರ್ ಬಿಜೂರು, ಕಳವಾಡಿ, ನಾಗರಕೋಡಿಗೆ, ಸಾಲಿಗ್ರಾಮ, ಗೋಳಿಗರಡಿ, ಹಾಲಾಡಿ, ಮಂದಾರ್ತಿ, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿದ್ದರು.
ಎಲ್ಲಾ ರೀತಿಯ ಪೌರಾಣಿಕ ಸ್ತ್ರೀ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾರಸಿಕರ ಪ್ರೀತಿಗೆ ಪಾತ್ರರಾ ಗಿದ್ದರು. ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
Next Story




