ಹಿರಿಯಡ್ಕ: ಜಿಲ್ಲಾ ಕಾರಾಗೃಹಕ್ಕೆ ಸಂದರ್ಶಕರ ಮಂಡಳಿ ಭೇಟಿ, ಪರಿಶೀಲನೆ

ಉಡುಪಿ, ಅ.24: ಹಿರಿಯಡ್ಕ ಸಮೀಪದ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಉಡುಪಿ ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿ ಶುಕ್ರವಾರ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಯ ಕುರಿತು ಪರಿಶೀಲನೆ ನಡೆಸಿತು.
ಬಳಿಕ ಕಾರಾಗೃಹದಲ್ಲೇ ಉಡುಪಿ ಜಿಲ್ಲಾ ಕಾರಾಗೃಹ ಸಂದರ್ಶಕರ ಮಂಡಳಿಯ ಸರ್ವ ಸದಸ್ಯರ ಸಭೆ ನಡೆಸಿ ಕಾರಾಗೃಹದಲ್ಲಿ ತುರ್ತಾಗಿ ನಡೆಯಬೇಕಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕುರಿತಂತೆ ಸಮಾ ಲೋಚನೆ, ಸುಧೀರ್ಘ ಚರ್ಚೆ ನಡೆಸಿತು.
ಸಭೆಯಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.
ಅಲ್ಲದೇ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿಯ ಕಿರಣ್ ಎಸ್ ಗಂಗಣ್ಣ ನವರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Next Story




