ಉಡುಪಿ: ಅಲ್ಲಲ್ಲಿ ಮಳೆ; ಮೂರು ಮನೆಗಳಿಗೆ ಹಾನಿ

ಉಡುಪಿ, ಅ.24: ಉಡುಪಿ ಜಿಲ್ಲೆಯ ಅಲ್ಲಲ್ಲಿ ಶನಿವಾರ ಅಪರಾಹ್ನದ ಬಳಿಕ ಸಾಧಾರಣ ಮಳೆ ಬಂದಿದೆ. ನಿನ್ನೆ ಸುರಿದ ಅಬ್ಬರದ ಮಳೆಗೆ ಮೂರು ಮನೆ ಹಾಗೂ ಸಿಡಿಲಿನಿಂದ ಒಂದು ಮನೆ ಹಾನಿಗೊಂಡ ಬಗ್ಗೆ ವರದಿ ಬಂದಿದೆ.
ಕಾಪು ತಾಲೂಕು ಪಲಿಮಾರು ಗ್ರಾಮದ ಮಾಧವ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶ: ಹಾನಿಯಾದರೆ, ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಶ್ರೀನಿವಾಸ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶ: ಹಾನಿಯಾ ಗಿದೆ. ಇನ್ನು ಅಂಪಾರು ಗ್ರಾಮದ ಗುಲಾಬಿ ಸುರೇಂದ್ರ ಶೇಟ್ ಅವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿ ಸಂಭವಿ ಸಿದೆ. ಇದರಿಂದ ಒಟ್ಟಾರೆಯಾಗಿ ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಹಿಂದಿನ 24ಗಂಟೆಗಳ ಅವಧಿಯಲ್ಲಿ ಸರಾಸರಿ 29 ಮಿ.ಮೀ. ಮಳೆಯಾಗಿದೆ. ಬ್ರಹ್ಮಾವರದಲ್ಲಿ ಅತ್ಯಧಿಕ 39.5ಮಿ.ಮೀ. ಮಳೆಯಾದರೆ, ಕುಂದಾಪುರದಲ್ಲಿ 38.4, ಬೈಂದೂರಿನಲ್ಲಿ29.5, ಕಾರ್ಕಳದಲ್ಲಿ 26.9, ಹೆಬ್ರಿಯಲ್ಲಿ 22.3, ಉಡುಪಿಯಲ್ಲಿ 15.6 ಹಾಗೂ ಕಾಪುವಿನಲ್ಲಿ 10.5ಮಿ.ಮೀ. ಮಳೆಯಾದ ಬಗ್ಗೆ ವರದಿಗಳು ಬಂದಿವೆ.
Next Story




