Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಯುವ ಜನಾಂಗ ಕಾರಂತರ ಚಿಂತನೆ...

ಯುವ ಜನಾಂಗ ಕಾರಂತರ ಚಿಂತನೆ ಮೈಗೂಡಿಸಿಕೊಂಡು, ಸಮಾಜಕ್ಕೆ ಶಕ್ತಿ ತುಂಬಲು ನಾಯಕತ್ವ ಗುಣ ಬೆಳೆಸಿಕೊಳ್ಳಿ: ಸಭಾಪತಿ ಸಲೀಂ ಅಹಮದ್

ಪ್ರೊ.ಬರಗೂರುಗೆ ಡಾ.ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ವಾರ್ತಾಭಾರತಿವಾರ್ತಾಭಾರತಿ24 Oct 2026 8:42 PM IST
share
ಯುವ ಜನಾಂಗ ಕಾರಂತರ ಚಿಂತನೆ ಮೈಗೂಡಿಸಿಕೊಂಡು, ಸಮಾಜಕ್ಕೆ ಶಕ್ತಿ ತುಂಬಲು ನಾಯಕತ್ವ ಗುಣ ಬೆಳೆಸಿಕೊಳ್ಳಿ: ಸಭಾಪತಿ ಸಲೀಂ ಅಹಮದ್

ಕುಂದಾಪುರ, ಅ.24: ದೇಶ ಬೆಳೆಯಬೇಕಾದರೆ, ಸಮಾಜಕ್ಕೆ ಶಕ್ತಿ ತುಂಬಲು ಯುವಜನತೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸುಭದ್ರ, ಸಮ ಸಮಾಜ ನಿರ್ಮಾಣಕ್ಕೆ ಅವರು ಕೊಡುಗೆ ನೀಡಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಸಲೀಂ ಅಹಮ್ಮದ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಹಾಗೂ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಶನಿವಾರ ಸಂಜೆ ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಶನಿವಾರ ಡಾ.ಶಿವರಾಮ ಕಾರಂತ ಜನ್ಮ ದಿನೋತ್ಸವ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಹಾಗೂ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.

ಡಾ.ಕಾರಂತರದ್ದು ಅಪರೂಪದ ಅದ್ಭುತ ವ್ಯಕ್ತಿತ್ವ. ಎಲ್ಲಾ ಕ್ಷೇತ್ರಗಳಲ್ಲಿ ಭಾಗಿಯಾಗಿದ್ದವರು. ಇಂಥ ಪ್ರಶಸ್ತಿಗೆ ಆಯ್ಕೆ ಮಾಡುವುದು ಜವಾಬ್ದಾರಿಯ ಕೆಲಸ. ಶಿವರಾಮ ಕಾರಂತರ ಹೆಸರಿನಲ್ಲಿ ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರಶಸ್ತಿ ಪ್ರದಾನಿಸಿದ್ದು ಸಂತಸ ನೀಡಿದೆ. ಡಾ.ಶಿವರಾಮ ಕಾರಂತರ ಹೋರಾಟ, ಚಿಂತನೆ, ಬದುಕು, ವಿಚಾರಧಾರೆ ಗಳ ಕುರಿತಾಗಿ ನಡೆದ ಈ ಕಾರ್ಯಕ್ರಮ ಅನುಕರಣೀಯವಾದದು. ವಿದ್ಯಾರ್ಥಿಗಳು, ಯುವ ಜನಾಂಗ ಕಾರಂತರ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.

35 ವರ್ಷಗಳ ಹಿಂದೆ ಮೇಸ್ಟ್ರು ಜೊತೆ (ಪ್ರೊ.ಬರಗೂರು) ಒಡನಾಟವಿತ್ತು. ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೆ. ಇವರದ್ದು ಹೋರಾಟದ ಬದುಕು. ಬಡವರು, ಶೋಷಿತರ ಪರವಾಗಿ ನಿಂತು ಲೇಖನದ ಮೂಲಕ ಸಂದೇಶ ನೀಡಿದವರು ಬರಗೂರು ಮೇಸ್ಟ್ರು ಎಂದರು.

ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ ಮಾತನಾಡಿ, ಕೋಟದಲ್ಲಿ ಜನಿಸಿದರೂ ಕಾರಂತರ ಕರ್ಮಭೂಮಿ ಪುತ್ತೂರಾಗಿದ್ದು ಅಲ್ಲಿ ಹಲವು ಕಾರ್ಯಚಟುವಟಿಕೆಗಳನ್ನು ನಡೆಸಿದ್ದಾರೆ. ಅಲ್ಲಿ ಸುಂದರ ಪರಿಸರವನ್ನು ನಿರ್ಮಿಸಿದ್ದಾರೆ. ಜಾತ್ಯಾತೀತ ತತ್ವವನ್ನು ಮೈಗೂಡಿಸಿಕೊಂಡಿದ್ದವರು. ಬರಗೂರು ಅವರು ನೀಡಿದ ವರದಿ ಹಲವರಿಗೆ ಅನುಕೂಲವಾಗಿದೆ. ಅವರಿಗೆ ಪ್ರಶಸ್ತಿ ನೀಡಿದ್ದು ಅದರ ಮೌಲ್ಯ ಹೆಚ್ಚಿಸಿದೆ ಎಂದರು.

ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಬುಲೆಟಿನ್ ಬಿಡುಗಡೆಗೊಳಿಸಿ ಮಾತನಾಡಿ, ಒತ್ತಡ ಹೇರಿ ಪ್ರಶಸ್ತಿ ಪಡೆಯುವ ಕಾಲಘಟ್ಟದಲ್ಲಿ ಅರ್ಹತೆ ಯುಳ್ಳವರಿಗೆ ಪ್ರಶಸ್ತಿ ದೊರೆತಾಗ ಅದರ ಮೌಲ್ಯಗಳು ಹೆಚ್ಚುತ್ತದೆ. ಕಾರಂತರ ಚಿಂತನೆ ಮೈಗೂಡಿಸಿಕೊಂಡಿರುವ ಬರಗೂರು ರಾಮಚಂದ್ರಪ್ಪ ಅವರಿಗೆ ಕಾರಂತ ಪ್ರಶಸ್ತಿಯನ್ನು ನೀಡುತ್ತಿರುವುದು ಸ್ತುತ್ಯರ್ಹ ಎಂದರು.

ಕಾರಂತ ವಿಶೇಷ ಪುರಸ್ಕಾರ: ಖ್ಯಾತ ಮನೋವೈದರು ಮತ್ತು ಲೇಖಕರಾದ ಡಾ.ಪಿ.ವಿ ಭಂಡಾರಿ, ಸಮಾಜ ಸೇವಕ ಗಣೇಶ್ ಕೊರಗ, ನಿವೃತ್ತ ಪ್ರಾಧ್ಯಾಪಕರು ಮತ್ತು ಲೇಖಕರಾದ ಪ್ರೊ. ಯು. ಮಹೇಶ್ವರಿ ಕಾಸರಗೊಡು, ಪತ್ರಕರ್ತ ಕುಂದಾಪುರದ ಜಾನ್ ಡಿಸೋಜಾ ಹಾಗೂ ಖ್ಯಾತ ರಂಗತಜ್ಞ ಡಾ.ಶ್ರೀಪಾದ್ ಭಟ್ ಇವರಿಗೆ ಕಾರಂತ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕುಂದಾಪುರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ, ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತಾ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಕಾರ್ಕಳದ ಕರಾವಳಿ ರಂಗಾಯಣ ನಿರ್ದೇಶಕ ಡಾ. ಬಿ.ಆರ್ ವೆಂಕಟರಮಣ ಐತಾಳ, ಟ್ರಸ್ಟ್‌ನ ಸದಸ್ಯರಾದ ಡಾ.ಎಂ. ಪ್ರಸಾದ್ ರಾವ್, ಸತೀಶ್ ಕೊಡವೂರು, ಜಿ.ಎಂ.ಶರೀಫ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.

ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಉಮೇಶ್ ಶೆಟ್ಟಿ ಕೊತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿದರು.

ಡಾ. ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕಾಲೇಜಿನ ಉಪನ್ಯಾಸಕರಾದ ರಕ್ಷಿತ್ ರಾವ್ ಗುಜ್ಜಾಡಿ, ನಿರ್ಮಲಾ, ಸ್ವಾತಿ ರಾವ್, ಯೋಗೀಶ್ ಶ್ಯಾನುಭಾಗ್, ದೀಪಿಕಾ ಜಿ. ಪರಿಚಯಿಸಿದರು. ಟ್ರಸ್ಟ್ ಸದಸ್ಯರಾದ ಡಾ. ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ, ಡಾ. ಭಾರತಿ ಮರವಂತೆ ವಂದಿಸಿದರು.

ಚೋಮನ ದುಡಿಯ ಶಬ್ದ ಇನ್ನೂ ನಿಂತಿಲ್ಲ: ಪ್ರೊ.ಬರಗೂರು

ಡಾ.ಕಾರಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ, ವಿದ್ವಾಂಸ ಹಾಗೂ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ, ಚೋಮನ ದುಡಿಯ ಶಬ್ದ ಇನ್ನೂ ದೇಶದಲ್ಲಿ ನಿಂತಿಲ್ಲ. ಅದಕ್ಕಾಗಿ ಕಾರಂತರ ಚಿಂತನೆ ಇಂದಿಗೂ ಪ್ರಸ್ತುತ. ಪ್ರತಿ 18 ನಿಮಿಷಕ್ಕೆ ಓರ್ವ ದಲಿತನ ಮೇಲೆ ಹಲ್ಲೆ ಸಹಿತ, ಕೊಲೆ, ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಕೈಯಲ್ಲಿ ಮಲ ಎತ್ತುವವರು, ತಳ್ಳು ಗಾಡಿಯಲ್ಲಿ ಮಲ ತೆಗೆದುಕೊಂಡು ಹೋಗುವವರು ಇನ್ನೂ ಇದ್ದಾರೆ ಎಂದರು.

ಬೀದಿ ಭಾರತ ಸ್ವಚ್ಚವಾಗುವ ಜೊತೆಗೆ ಭಾವ ಭಾರತ ಸ್ವಚ್ಚವಾಗಬೇಕು. ಕಾರಂತರ ಕನಸಿನ ಚೋಮನಿಗೆ ಭೂಮಿ ಸಿಗುತ್ತದೆ. ಪ್ರಜಾಪ್ರಭುತ್ವದ ಸವಾಲುಗಳೇನು ಎಂಬುದು ಇಂದು ವಿಮರ್ಶೆಯಾಗಬೇಕಿದೆ. ಚುನಾವಣೆ ಯೊಂದೇ ಪ್ರಜಾಪ್ರಭುತ್ವ ಅಲ್ಲ. ಇನ್ನೊಬ್ಬರಿಗೆ ಬೆಲೆ ಕೊಡುವುದು, ಸಮಾನತೆ, ಸೌಹಾರ್ದತೆ, ಸಮ ಸಮಾಜ ಪ್ರಜಾ ಪ್ರಭುತ್ವದ ಆಶಯ. ಇಂದು ಧರ್ಮ, ಜಾತಿ, ಸಂಸ್ಕೃತಿಯನ್ನು ಕರೆನ್ಸಿಯಾಗಿ ಕಾಣಲಾಗುತ್ತಿದೆ ಎಂದರು.

ಕಾರಂತರು ಬದುಕಿನ ತಾತ್ವಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಂಡ ಸಿದ್ದಾಂತವಾದಿ. ಚಲನಶೀಲತೆಯೇ ಬದುಕು ಎಂದು ಪ್ರತಿಪಾದಿಸಿದವರು. ಕಾಲ ಚಲಿಸುತ್ತಿದ್ದಂತೆ ಅದರ ಜೊತೆಗೆ ವಿಚಾರಧಾರೆಗಳನ್ನು ಚಲನಶೀಲ ವಾಗಿ ಮುಂದುವರೆಸಿಕೊಂಡು ಹೋಗಬೇಕೆಂಬುದನ್ನು ನಂಬಿದ್ದರು.

ಕಾರಂತರು ತಮ್ಮ ಕಾದಂಬರಿ, ನಾಟಕ, ಕಲಾಪ್ರಪಂಚ, ಬಾಲ ಪ್ರಪಂಚದ ಮೂಲಕ ವಿಸ್ಮಯ ಮೂಡುವಂತೆ ಮಾಡಿದ್ದಾರೆ. ಒಂದು ಸಂಸ್ಥೆಗಿಂತ ಹೆಚ್ಚು ಕೆಲಸ ಮಾಡಿದ ಅದಮ್ಯ ಚೇತನ. ಸ್ವತಂತ್ರ, ವಿಮರ್ಶಾತ್ಮಕ, ವೈಚಾರಿಕ ಚಿಂತನೆಯೊಂದಿಗೆ ವ್ಯಕ್ತಿ ಸ್ವಾತಂತ್ಯಕ್ಕೆ ಬೆಲೆ ಕೊಟ್ಟಿದ್ದರು. ಜೀವನದುದ್ದಕ್ಕೂ ಮೌಡ್ಯ ವಿರೋಧಿ ಚಿಂತನೆ ಬಿಟ್ಟುಕೊಟ್ಟಿಲ್ಲ. ವಾಸ್ತವಿಕ ಬದುಕಿನ ಬಗ್ಗೆ ಅರಿವು ಹೊಂದಿದ್ದ ಲೇಖಕರಾಗಿದ್ದರು ಎಂದರು.




share
ವಾರ್ತಾಭಾರತಿ
ವಾರ್ತಾಭಾರತಿ
Next Story
X