ಮಾತಿಗೆ ಬದ್ಧವಾಗಿ ನಡೆದ ರಾಜ್ಯ ಕಾಂಗ್ರೆಸ್ ಸರಕಾರ: ಸುಧೀರ್ ಕುಮಾರ್ ಮರೊಳ್ಳಿ

ಶಿರ್ವ, ಅ.24: ಕಪ್ಪು ಹಣ, ಪೆಟ್ರೋಲ್ ಬೆಲೆ ಇಳಿಕೆ, ಉದ್ಯೋಗ ಸೃಷ್ಠಿ, ಅಚ್ಚೆ ದೀನ್ ಎಂಬ ಭಾಷಣ ಮಾಡಿಯೇ ಮೋದಿ ಮೂರು ಚುನಾವಣೆಗಳನ್ನು ಗೆದ್ದರೂ ಯಾವುದೇ ಭರವಸೆಯನ್ನು ಈಡೇರಿಸಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಪಂಚ ಗ್ಯಾರೆಂಟಿಯನ್ನು ಘೊಷೀಸಿ ಮಾತಿಗೆ ಬದ್ಧವಾಗಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೊಳ್ಳಿ ಹೇಳಿದ್ದಾರೆ.
ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಮೂಡುಬೆಳ್ಳೆ ಗೀತಾ ಮಂದಿರದಲ್ಲಿ ಅ.24ರಂದು ಆಯೋಜಿಸ ಲಾದ ಪಂಚ ಗ್ಯಾರೆಂಟಿ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಮಾವೇಶದಲ್ಲಿ ನೆರೆದಿರುವ ಫಲಾನುಭವಿಗಳ ಸಂಖ್ಯೆಯೇ ರಾಜ್ಯದ ಕಾಂಗ್ರೆಸ್ ಸರಕಾರದ ಸಾಧನೆಗೆ ಸಾಕ್ಷಿಯಾ ಗಿದೆ. ಯಾವುದೇ ಜಾತಿ, ಧರ್ಮದ ಭೇದ ಇಲ್ಲದೆ ನಮ್ಮ ಸರಕಾರ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.
ಬೆಳ್ಳೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನ್ಸೆಂಟ್ ಫೆರ್ನಂಡಿಸ್ ಅಧ್ಯಕ್ಷತೆ ವಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸಮ್ಮಾನಿಸಲಾಯಿತು.
ಕಾಪು ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ನೀನ್ಚಂದ್ರ ಸುವರ್ಣ, ಜಿಪಂ ಮಾಜಿ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಐಡಾ ಗಿಬ್ಬ ಡಿಸೋಜ, ಬೆಳ್ಳೆ ಸೊಸೈಟಿ ನಿರ್ದೇಶಕ ಪಟೇಲ್ಮನೆ ದಯಾನಂದ ಶೆಟ್ಟಿ, ಸಿಎ ಪ್ರಿತೇಶ್ ಡೇಸಾ, ಭೂ ನ್ಯಾಯ ಮಂಡಳಿ ಸದಸ್ಯ ರಾಘವ ಕೋಟ್ಯಾನ್, ಕೆಡಿಪಿ ಸದಸ್ಯ ಎಂ.ರಮೇಶ್, ಕಾಂಗ್ರೆಸ್ ತಾಲ್ಲೂಕು ಸುತಿ ಪದಾಧಿಕಾರಿಗಳಾದ ರೀನಾ ವಿನುತಾ ಡಿಸೋಜ ಹೆಜಮಾಡಿ, ಪ್ರಭಾಕರ ಆಚಾರ್ಯ ಕಟಪಾಡಿ, ಸುಧೀರ್ ಕರ್ಕೇರಾ ಹೆಜಮಾಡಿ, ಹಸನ್ ಬಾವಾ ಪಡುಬಿದ್ರಿ ಉಪಸ್ಥಿತರಿದ್ದರು.
ಬೆಳ್ಳೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್ ಸುವರ್ಣ ಸ್ವಾಗತಿಸಿದರು. ಚಾರ್ಲ್ಸ್ ಕ್ವಾಡ್ರಸ್ ವಂದಿಸಿದರು. ತಾಪಂ ಮಾಜಿ ಸದಸ್ಯೆ ಸುಜಾತಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಶಂಕರ್ದಾಸ್ ಮತ್ತು ತಂಡದವರಿಂದ ಸಂವಿಧಾನ ಕುರಿತ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.






