ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನೂತನ ಕಚೇರಿಗೆ ಸಭಾಪತಿ ಸಲೀಂ ಅಹ್ಮದ್ ಭೇಟಿ

ಉಡುಪಿ: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಶನಿವಾರ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನೂತನ ಕಚೇರಿಗೆ ಭೇಟಿ ನೀಡಿದರು.
ಸಭಾಪತಿಯಾದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸಲೀಂ ಅವರನ್ನು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಮೌಲಾ ಸ್ವಾಗತಿಸಿ, ಸನ್ಮಾನಿಸಿದರು. ಒಕ್ಕೂಟದ ನೂತನ ಕಚೇರಿ ಹಾಗೂ ಸಭಾಂಗಣವನ್ನು ಸಲೀಂ ಅಹ್ಮದ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಲೀಂ, ಒಕ್ಕೂಟ ಸಮುದಾಯದ ಏಕತೆಗೆ ಹಾಗೂ ಕೋಮು ಸೌಹಾರ್ದತೆಗೆ ಸಾಕಷ್ಟು ಶ್ರಮಿಸುತ್ತಿದ್ದು ಇದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಂತಹ ಒಕ್ಕೂಟಗಳು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಆಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಬಿಎಸ್ಎಫ್ ರಫೀಕ್, ಉಪಾಧ್ಯಕ್ಷರಾದ ಶಬೀ ಅಹ್ಮದ್ ಖಾಝಿ, ಶಹಬಾನ್ ಹಂಗಳೂರ್, ಆಸೀಫ್ ಬೈಕಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಝಮೀರ್ ಅಹ್ಮದ್ ರಶಾದಿ ಕಾರ್ಯದರ್ಶಿ ಜಫರುಲ್ಲಾ, ಖಜಾಂಚಿ ಇಕ್ಬಾಲ್ ಕಟಪಾಡಿ, ಜಿಲ್ಲಾ ಪದಾಧಿಕಾರಿಗಳಾದ ಪೀರು ಸಾಹೇಬ್, ಇಕ್ಬಾಲ್ ಮನ್ನಾ, ನಮ್ಮ ನಾಡ ಒಕ್ಕೂಟದ ಜಿಲ್ಲಾಧ್ಯಕ್ಷ ನಕ್ವಾ ಯಾಹ್ಯಾ, ಉಡುಪಿ ಜಾಮಿಯಾ ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಸಾಲಿಹಾತ್ ಶಿಕ್ಷಣ ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷ ಡಾ.ಶಾಹನವಾಝ್ ಹಾಗೂ ಒಕ್ಕೂಟದ ವಿವಿಧ ತಾಲೂಕು ಘಟಕಗಳ ಪದಾಧಿಕಾರಿ ಗಳು, ಸದಸ್ಯರು ಮತ್ತು ಕಾಂಗ್ರೆಸ್ ಮುಖಂಡರಾದ ಹಬೀಬ್ ಅಲಿ, ಶಾಹೀದ್ ತೆಕ್ಕಿಲ್ ಮೊದಲಾದವರು ಉಪಸ್ಥಿತರಿದ್ದರು.






