ಮತದಾರರ ಹಕ್ಕನ್ನು ರಕ್ಷಿಸಲು ಆಂದೋಲನ: ಕಮಲೇಶ್ವರ ಪಟೇಲ್

ಉಡುಪಿ, ಅ.26: ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಪವಿತ್ರವಾದ ಮತದಾನದ ಹಕ್ಕುಗಳು ಇಂದು ಎದುರಿಸುತ್ತಿರುವ ಸವಾಲುಗಳ ವಿರುದ್ಧ ಧ್ವನಿಯುತ್ತಲು ಅಖಿಲ ಭಾರತ ಕಾಂಗ್ರೆಸ್ ವೋಟ್ ಬಚಾವೋ-ದೇಶ ಬಚಾವೋ ಎಂಬ ದೇಶವ್ಯಾಪಿ ಬೃಹತ್ ಜನಂದೋಲನ ವನ್ನು ಹಮ್ಮಿಕೊಂಡಿದೆ ಎಂದು ಅಭಿಯಾನದ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಉಸ್ತುವಾರಿ, ಸಿಡಬ್ಲ್ಯುಸಿ ಸದಸ್ಯ ಹಾಗೂ ಮಾಜಿ ಸಚಿವ ಕಮಲೇಶ್ ಪಟೇಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಚಳುವಳಿಯನ್ನು ಯಶಸ್ವಿಗೊಳಿಸಲು ಸಮಗ್ರ ಕ್ರೀಯಾ ಯೋಜನೆಯನ್ನು ರೂಪಿಸಲಾಗಿದ್ದು ಎಲ್ಲಾ ಹಂತಗಳಲ್ಲಿ ಯಶಸ್ವಿಗೊಳಿಸ ಬೇಕಾಗಿದೆ. ನ.1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿ ರುವ ವೋಟ್ ಬಚಾವೋ ದೇಶ ಬಚಾವೋ ಪ್ರತಿಭಟನೆಗೆ ಪ್ರತಿ ಜಿಲ್ಲೆಯಿಂದ ಕನಿಷ್ಟ 100 ಕಾರ್ಯಕರ್ತರು ಭಾಗವಹಿಸುವಂತೆ ಜಿಲ್ಲೆ, ಬ್ಲಾಕ್ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಮಾರ್ಗದರ್ಶನ ನಿಡಲಾಗುವುದು ಎಂದರು.
ಕಾಂಗ್ರೆಸ್ ಪಕ್ಷವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಮತದಾರರ ಪಟ್ಟಿ ಯಿಂದ ತೆಗೆದುಹಾಕಲಾಗಿದೆ ಎಂದು ಹೇಳುವ 13.3ಕೋಟಿ ಹೆಸರುಗಳನ ಮರು ಸ್ಥಾಪನೆ ಮತ್ತು ಗಂಭೀರ ವ್ಯತ್ಯಾಸ ಗಳ ಬಗ್ಗೆ ತನಿಖೆಗೆ ಆಗ್ರಹಿಸಲಾಗುವುದು. ಹೆಸರನ್ನು ಅಳಿಸಲಾದ ಪ್ರತಿ ಮತದಾರರಿಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕು, ನಾಗರಿಕನಿಗೆ ತನ್ನ ಹೊರಗಿಡುವಿಕೆಯನ್ನು ಪ್ರಶ್ನಿಸಲು ಮತ್ತು ತಮ್ಮ ಹೆಸರಿನ ಮರುಸ್ಥಾಪನೆಯನ್ನು ಕೋರಲು ಅವಕಾಶ ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಮತಗಳನ್ನು ಕಸಿಯಲು ಪಿತೂರಿ ನಡೆಯುತ್ತಿದೆ. ನ.5ರಂದು ಕೆಪಿಸಿಸಿ ವತಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ವೋಟ್ ಬಜಾವ್ ದೇಶ್ ಬಚಾವೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅದೇ ದಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆಗಳನ್ನು ನಡೆಸಲಾಗುವುದು. ಅರ್ಹ ಮತದಾರರ ಹೆಸರು ಅಳಿಸಿ ಹಾಕಲು ಅಕ್ರಮವಾಗಿ ಫಾರ್ಮ್ -7 ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಾ ಗಿದೆ ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಪೂರ್, ಕರ್ನಾಟಕ ಸರಕಾರ ಬೀಜ ಮತ್ತು ಸಾವಯವ ಪ್ರಮಾಣ ನಿಗಮದ ಅಧ್ಯಕ್ಷೆ ಲಾವಣ್ಯ ಬಲ್ಲಾಳ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ದಿನಕರ ಹೇರೂರು, ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಾಜ ಪೂಜಾರಿ, ದಿನೇಶ್ ಮೊಳಹಳ್ಳಿ, ಮುನಿಯಾಲು ಉದಯಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಶುಭದರಾವ್, ಸದಾನಂದ ಶೆಟ್ಟಿ, ಗೋಪಿನಾಥ್ ಭಟ್, ರಾಘವೇಂದ್ರ ಶೆಟ್ಟ್ವಿ, ತಿಮ್ಮ ಪೂಜಾರಿ, ಪ್ರದೀಪ್ ಕುಮಾರ್ ಹಾಗೂ ದಿನೇಶ್ ಪುತ್ರನ್, ಬಿ. ನರಸಿಂಹ ಮೂರ್ತಿ, ಕೃಷ್ಣ ಶೆಟ್ಟಿ ಬಜಗೋಳಿ, ಸುನಿಲ್ ಬಂಗೇರ, ಶರ್ಪುದ್ದೀನ್ ಶೇಖ್, ಪ್ರಖ್ಯಾತ್ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಹರಿಪ್ರಸಾದ್ ರೈ,್ವ ಮಹಾಬಲ ಕುಂದರ್, ಹರೀಶ ಶೆಟ್ಟಿ ಪಾಂಗಾಳ, ಶಶಿಧರ ಶೆಟ್ಟಿ ಎಲ್ಲೂರು, ಪ್ರಶಾಂತ ಪೂಜಾರಿ, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಸಂಜಯ ಆಚಾರ್ಯ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.






