ಸೊಂಟನೋವು: ಉಚಿತ ಆಯುರ್ವೇದ ತಪಾಸಣೆ, ಚಿಕಿತ್ಸಾ ಶಿಬಿರ

ಮಣಿಪಾಲ : ಮುನಿಯಾಲ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸೊಂಟನೋವು, ಬೆನ್ನಿನ ಬಿಗಿತದಿಂದ ಬಳಲುತ್ತಿರುವವರಿಗಾಗಿ ನ.2ರಿಂದ 7ರವರೆಗೆ ಉಚಿತ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಆಯೋಜಿಸಲಾಗಿದೆ.
ಲಂಬಾರ್ ಸ್ಪಾಂಡಿಲೋಸಿಸ್ ಸಮಸ್ಯೆಯಿಂದ ಬಳಲುವವರಿಗೆ ವಿಶೇಷ ಆಯುರ್ವೇದ ತಪಾಸಣೆ ಹಾಗೂ ಉಚಿತ ಚಿಕಿತ್ಸಾ ಸೌಲಭ್ಯವನ್ನು ಶಿಬಿರದಲ್ಲಿ ಒದಗಿಸಲಾಗುವುದು. ಬೆನ್ನುನೋವು ಮತ್ತು ಸೊಂಟದ ನೋವಿನ ಸಮಸ್ಯೆಗಳಿಗೆ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯಬಹುದು. ಶಿಬಿರವು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 4.30ರವರೆಗೆ ಮುನಿಯಾಲ್ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲದಲ್ಲಿ ನಡೆಯಲಿದೆ.
ಶಿಬಿರಕ್ಕೆ ಆಗಮಿಸುವ ರೋಗಿಗಳು ಈ ಹಿಂದೆ ಎಕ್ಸ್-ರೇ ಅಥವಾ ಸಂಬಂಧಿತ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಂಡಿದ್ದರೆ, ಅವುಗಳ ವರದಿಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಲು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ-8123403233 ನ್ನು ಸಂಪರ್ಕಿಸ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.




