ಯುವಕನ ಮೇಲೆ ನಾಯಿ ದಾಳಿ

ಶಿರ್ವ, ಅ.27: ನೆರೆಮನೆಯ ಸಾಕುನಾಯಿಯೊಂದು ದಾಳಿ ನಡೆಸಿ ಯುವಕನೋರ್ವನಿಗೆ ತೀವ್ರ ಗಾಯಗೊಳಿಸಿರುವ ಘಟನೆ ಶಿರ್ವ ಗ್ರಾಮದ ಗುರುಂಜ ಎಂಬಲ್ಲಿ ಅ.20ರಂದು ಸಂಜೆ ವೇಳೆ ನಡೆದಿದೆ.
ಶಿರ್ವದ ವಿನ್ಸನ್ ಫೆರಾವೋ(19) ಎಂಬವರು ತಮ್ಮ ಮನೆಯ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ನೆರೆಮನೆಯ ಆಲ್ವಿನ್ ಡಿಸೋಜ ಎಂಬವರ ಸಾಕು ನಾಯಿ ಓಡಿಸಿಕೊಂಡು ಬಂದು ವಿನ್ಸನ್ ಫೆರಾವೋ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಇದರಿಂದ ವಿನ್ಸನ್ ಫೆರಾವೊ ಅವರಿಗೆ ನಾಯಿ ಸುಮಾರು 6ರಿಂದ 7 ಬಾರಿ ಕಚ್ಚಿ ಗಾಯ ಗೊಳಿಸಿದೆ ಎಂದು ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




