ಅಕೌಟೆಂಟ್ ನಾಪತ್ತೆ

ಕಾರ್ಕಳ, ಅ.27: ನಿಂಜೂರಿನ ಎಡ್ಮೇರು ನಿವಾಸಿ ಬಾಲಕೃಷ್ಣ ಆಚಾರ್ಯ ಎಂಬವರ ಮಗ ಅಕ್ಷಯ ಆಚಾರ್ಯ(30) ಎಂಬವರು ಅ.17ರಿಂದ ನಾಪತ್ತೆಯಾಗಿದ್ದಾರೆ.
ಬೆಂಗಳೂರಿನ ಹೊಟೇಲಿನಲ್ಲಿ ಅಕೌಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ಅ.17ರಂದು ಊರಿಗೆ ಬಂದಿದ್ದು, ಕೆಲಸಕ್ಕೆ ವಾಪಾಸ್ಸು ಬರುವಂತೆ ಮಾಲಕರು ಕರೆ ಮಾಡಿದ್ದರೆನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕೆಲಕ್ಕೆ ಹೋಗುವುದಾಗಿ ಹೇಳಿ ಹೋದ ಅಕ್ಷಯ್, ಬೆಂಗಳೂರಿಗೆ ಕೆಲಸಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




