ಉಡುಪಿ ಸಂತೃಪ್ತಿ ಪರಿಯಾಳ ಬಳಗದ ದಶಮ ಸಂಭ್ರಮ

ಉಡುಪಿ, ಅ.29: ಉಡುಪಿ ಸಂತೃಪ್ತಿ ಪರಿಯಾಳ ಬಳಗದ ದಶಮ ಸಂಭ್ರಮದ ಪ್ರಯುಕ್ತ ಆರೋಗ್ಯ ತಪಾಸಣೆ, ಸಮಾಜದ ಪ್ರತಿಭೆಗಳ ಅನಾವರಣ, ಕಲಾ ಕಾರಂಜಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ‘ಪರಿಯಾಳ ಸಂಗಮ’ ಸೋಮವಾರ ಉಡುಪಿಯ ಅಮೃತ್ ಗಾರ್ಡನ್‌ನಲ್ಲಿ ನಡೆಯಿತು.
ದಶಮ ಸಂಭ್ರಮವನ್ನು ಉದ್ಘಾಟಿಸಿದ ದಾನಿ, ಬಳಗದ ಪೋಷಕ ಹರೀಶ್ ಸುವರ್ಣ ಕಲ್ಸಂಕ ಮಾತನಾಡಿ, ಸಮಾಜದ ಯುವಕ ಯುವತಿಯರು ಮುಂಚೂಣಿಯಲ್ಲಿ ಸೇವೆ ನೀಡಲು ಮುಂದೆ ಬರಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಸಂತೃಪ್ತಿ ಪರಿಯಾಳ ಬಳಗದ ಅಧ್ಯಕ್ಷ ಶೇಖರ್ ಸಾಲಿಯಾನ್ ಅದಿಉಡುಪಿ ವಹಿಸಿದ್ದರು. ಜಿಲ್ಲಾ ಪರಿಯಾಳ ಸಮಾಜದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಜೇಸಿ ತರಬೇತುದಾರ ಕೆ.ರಾಜೇಂದ್ರ ಭಟ್ ಬದುಕು ಹಾಗೂ ಶಿಕ್ಷಣ ಜತೆ ಸಂಸ್ಕಾರ ಕುರಿತು ಉಪಾನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಹರ್ಷ ಭಾರತಿ ಟ್ರಸ್ಟ್‌ನ ಪ್ರವರ್ತಕಿ ಭಾರತಿ ಹರೀಶ್, ಸವಿತಾ ಸಮಾಜ ವಿವಿಧೋದ್ದೇಶ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಮಣಿಪಾಲ, ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ಸಂದೀಪ್ ಸಾಲಿಯಾನ್ ಹಾರಾಡಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ್ ಸಾಲಿಯಾನ್, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು ಭಂಡಾರಿ ಕಿನ್ನಿಮುಲ್ಕಿ, ಸಾಂತ್ವನ ಪರಿಯಾಳ ಬಳಗದ ಅಧ್ಯಕ್ಷ ಮನೋಜ್ ಸುವರ್ಣ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜದ ಸಾಧಕರಾದ ಗೋಪಾಲ ಸಾಲಿಯಾನ್ ಮಲ್ಪೆ, ಸಂಜೀವ ಸಾಲಿಯಾನ್ ಬೆಳು ವಾಯಿ, ವಿಶ್ವನಾಥ್ ಸಾಲಿಯಾನ್, ಅಣ್ಣಯ್ಯ ಸುವರ್ಣ ಕುಂದಾಪುರ, ವಾರಿಜ ಸುವರ್ಣ ಧೂಪದಕಟ್ಟೆ, ಶಂಕರ ಪಾತ್ರಿ ಮಜೂರು, ರವೀಂದ್ರ ಸಾಲಿಯಾನ್ ಮುದರಂಗಡಿ, ಬಾಲಕೃಷ್ಣ ಸುವರ್ಣ ಹಾರಾಡಿ, ಶಂಕರ್ ಸಾಲಿಯಾನ್ ಕಟಪಾಡಿ, ಭಾಸ್ಕರ್ ಸಾಲಿಯಾನ್ ಬ್ರಹ್ಮಾವರ, ಹಾಗೂ ಬಾಲ ಪ್ರತಿಭೆಗಳಾದ ಮಾ.ಪ್ರದ್ವಿನ್ ಮತ್ತು ಕು.ತೃಪ್ತಿ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಗಾಯತ್ರಿ ಹಾಗೂ ನಿಶ್ಮಿತಾ ಪ್ರಾರ್ಥಿಸಿದರು. ಸತ್ಯವತಿ ನಾಗೇಶ್ ಮಜೂರು ಹಾಗೂ ಪ್ರಶಾಂತ್ ಸಾಲಿಯಾನ್ ನಲ್ಲೂರು ಕಾರ್ಯಕ್ರಮ ನಿರೂಸಿದರು. ಮನೋಜ್ ಅಮೀನ್ ಮೂಡಬೆಟ್ಟು ವಂದಿಸಿದರು.






