ಗೋಳಿಕಟ್ಟೆ ನೂತನ ಅಲ್ ಫಲಾಹ್ ಮಸೀದಿ ಉದ್ಘಾಟನೆ
ಮಾಣಿ ಉಸ್ತಾದ್ರನ್ನು ಖಾಝಿಯಾಗಿ ಸ್ವೀಕಾರ - ಮಸೀದಿ ಸಂದರ್ಶನ

ಉಡುಪಿ, ನ.4: ಹಾವಂಜೆ ಗೋಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಲ್ ಫಲಾಹ್ ಜುಮಾ ಮಸೀದಿ ಬುಧವಾರ ಉದ್ಘಾಟನೆಗೊಂಡಿತು.
ಮಸೀದಿಯನ್ನು ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉದ್ಘಾಟಿಸಿ, ವಕ್ಫ್ ಮಾಡಿ, ದುವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಸೀದಿ ಅಲ್ಲಾಹನ ಭವನವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಪವಿತ್ರ ಕರ್ತವ್ಯ. ಮಸೀದಿಯ ಗೌರವ, ಶಿಸ್ತು ಮತ್ತು ಪಾವಿತ್ರ್ಯವನ್ನು ಸಂರಕ್ಷಿಸುವುದರ ಜೊತೆಗೆ, ನಾವು ಸರ್ವರೊಂದಿಗೂ ಸೌಹಾರ್ದತೆ, ಸಹಬಾಳ್ವೆ ಮತ್ತು ಐಕ್ಯತೆಯನ್ನು ಮೈಗೂಡಿಸಿಕೊಂಡು ಬದುಕಬೇಕು. ಪರಸ್ಪರ ಗೌರವ, ಪ್ರೀತಿ ಮತ್ತು ಸಹಕಾರದ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಇದೇ ಸಂದರ್ಭ ಮಾಣಿ ಉಸ್ತಾದ್ ಅವರನ್ನು ಮಸೀದಿಯಿಂದ ಖಾಝಿಯಾಗಿ ಸ್ವೀಕರಿಸಲಾಯಿತು. ಖಾಝಿಯನ್ನು ಮಸೀದಿ ವತಿಯಿಂದ ಗೌರವಿಸಲಾಯಿತು. ಮಸೀದಿಯ ಖತೀಬ್ ಅಬ್ದುಲ್ ರಝಾಕ್ ಅಲ್ಮದನಿ ಅಲ್ ಪುರ್ಖಾನಿ ಪ್ರಭಾಷಣ ಮಾಡಿದರು. ಅದೇ ರೀತಿ ಮಸೀದಿ ನಿರ್ಮಾಣಕ್ಕೆ ಮುಂಚೂಣಿಯಲ್ಲಿ ಶ್ರಮಿಸಿದ ಹಬೀಬುಲ್ಲ ಗೋಳಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಳ್ ಕೋಟೇಶ್ವರ, ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಬಶೀರ್ ಮದನಿ ಕಟಪಾಡಿ, ಹನೀಫ್ ಮದನಿ ಅಂಬಾಗಿಲು, ಉಮರ್ ಮದನಿ ಕಾಮಿಲ್, ಇಸ್ಮಾಯಿಲ್ ಸಖಾಫಿ ಆತ್ರಾಡಿ, ನೌಫಲ್ ಮದನಿ ಕುಂಜಾಲು, ಅಬ್ದುರ್ರಶೀದ್ ಸಖಾಫಿ ಮಜೂರು, ಶರೀಫ್ ಮುಸ್ಲಿಯಾರ್ ಮಟಪಾಡಿ, ಹಾಜಿ ಅಬೂಬಕ್ಕರ್ ನೇಜಾರು, ಕೆ.ಪಿ.ಇಬ್ರಾಹಿಂ ಮಟಪಾಡಿ, ಇಕ್ಬಾಲ್ ಕುಂಜಾಲು, ಹಬೀಬ್ ಅಲಿ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಜಿ.ಎ.ರೆಹಮಾನ್, ಗೌರವಾಧ್ಯಕ್ಷ ಇಸ್ಮಾಯಿಲ್ ಸಾಹೇಬ್, ಪ್ರಧಾನ ಕಾರ್ಯ ದರ್ಶಿ ಶಂಶುದ್ದೀನ್ ಮೊಹಮ್ಮದ್, ಗೋಳಿಕಟ್ಟೆ ಹಿದಾಯುತುಲ್ ಇಸ್ಲಾಂ ಮದರಸ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಅಲ್ಫಲಾಹ್ ಯಂಗ್ಮೆನ್ಸ್ ಅಧ್ಯಕ್ಷ ಮೊಹಮ್ಮದ್ ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.
ಸುನ್ನೀ ಕೋ ಆರ್ಡಿನೇಷನ್ ಜಿಲ್ಲಾಧ್ಯಕ್ಷ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಅಲ್ ಫುರ್ಖಾನಿ ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೀಫ್ ಗೋಳಿಕಟ್ಟೆ ಸ್ವಾಗತಿಸಿದರು.
ಸಾರ್ವಜನಿಕ ಮಸೀದಿ ಸಂದರ್ಶನ
ನೂತನ ಮಸೀದಿ ಉದ್ಘಾಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಸೀದಿ ಸಂದರ್ಶನ ಕಾರ್ಯಕ್ರಮವನ್ನು ಬೆಳಗ್ಗೆಯಿಂದ ಸಂಜೆಯವರೆಗೆ ಏರ್ಪಡಿಸ ಲಾಗಿತ್ತು.
ಸ್ಥಳೀಯ ವಿವಿಧ ಧರ್ಮಗಳ ಮುಖಂಡರು, ಸಾರ್ವಜನಿಕರು ಮಸೀದಿಗೆ ಆಗಮಿಸಿ ಮಸೀದಿಯ ಕುರಿತು ಅರಿತುಕೊಂಡರು. ಈ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯಕರ್ತ ಆಸೀಫ್ ಇಕ್ಬಾಲ್, ಕರ್ನಾಟಕ ಫಾರ್ವಡ್ ಟ್ರಸ್ಟ್ನ ಕುಟುಂಬ ಸಮಾಲೋಚಕಿ ಹುಮೈರಾ ಕಾರ್ಕಳ, ಜೆಐಎಚ್ ಸದಸ್ಯೆ ರೇಷ್ಮಾ ಬೈಲೂರು ನಡೆಸಿಕೊಟ್ಟರು.






